ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ... ನನಗೇ ಕೊರಟಗೆರೆ ವಿಧಾನ ಸಭಾ ಜೆಡಿಎಸ್ ಪಕ್ಷದ ಟಿಕೆಟ್ ನೀಡಬೇಕು, ಸದಾಶಿವ ಆಯೋಗದಲ್ಲಿ ನ್ಯಾಯವನ್ನು ವರಿಷ್ಠರು ಒದಗಿಸಬೇಕು.... ಮುನಿಯಪ್ಪ ಒತ್ತಾಯ
ಕೊರಟೆಗೆರೆ (ಫೆ.15):- ಕಳೆದ 20 ವರ್ಷದಿಂದ ಜೆಡಿಎಸ್ಪ ಕ್ಷದ ಕಾರ್ಯಕರ್ತನಾಗಿದ್ದು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನನಗೇ ಜೆಡಿಎಸ್ ಟಿಕೆಟ್ ನೀಡಬೇಕು ಎಂದು ಮಾಜಿ ಎಸ್ಸಿ ಜಿಲ್ಲಾ ಜೆಡಿಎಸ್ ಘಟಕದ ಉಪಾಧ್ಯಕ್ಷ ಮತ್ತು ಜಿಲ್ಲಾ ಸಂಚಾಲಕರಾದ ಮುನಿಯಪ್ಪ ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತಾಡಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ 40 ಸಾವಿರ ದಲಿತ ಸಮುದಾಯದ ಮತದಾರರಿದ್ದು ಅವರಲ್ಲಿ ಮಾದಿಗ ಸಮುದಾಯವೇ ಹೆಚ್ಚಾಗಿದ್ದು ಎ.ಜೆ ಸದಾಶಿವ ಆಯೋಗದ ಅನುಗುಣವಾಗಿ ಪ್ರಾಶತ್ಯ ನೀಡಿ ವರಿಷ್ಟರು ಟಿಕೆಟ್ಟನ್ನು ನನಗೇ ನೀಡಬೇಕು ಎಂದು ಆಗ್ರಹಿಸಿದರು.
ಲಾಲ್ ಕಾಂಗ್ರೇಸ್ ನಲ್ಲಿದ್ದರು:-
ಕೊರಟಗೆರೆ ಕ್ಷೇತ್ರದ ಈಗಿನ ಹಾಲಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಮೊದಲು ಕಾಂಗ್ರೇಸ್ ಪಕ್ಷದ ಕಾರ್ಯಕರ್ತ ಅವರು ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ನಂತರ ಜಿ.ಪಂ ಸದಸ್ಯರಾಗಿ ಕಾಂಗ್ರೇಸ್ ನಲ್ಲಿ ಗುರುತಿಸಿಕೊಂಡಿದ್ದವರು ಆದರೆ ನಾನು ನನ್ನ ರಾಜಕೀಯ ಭವಿಷ್ಯವನ್ನು ಆಯ್ಕೆ ಮಾಡಿಕೊಂಡಿರುವುದು ಜೆಡಿಎಸ್ ಪಕ್ಷ ಅಂದಿನಿಂದ ಇಂದಿನವರೆಗೂ ಪಕ್ಷಕ್ಕೆ ನಿಷ್ಠನಾಗಿದ್ದೇನೆ ವರಿಷ್ಠರು ನನ್ನ ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವಲೊತ್ತುಕೊಂಡಿದ್ದಾರೆ.
ನಾನು ಯಾರ ದ್ವೇಶಿಯಲ್ಲ ಸಮಾಜಿಕ ನ್ಯಾಯ ಕೇಳುತ್ತಿದ್ದೇನೆ ಅಷ್ಟೇ...
ನಾನು ಯಾರನ್ನೂ ದ್ವೇಶಿಸುವುದಿಲ್ಲ... ಸಾಮಾಜಿಕ ನ್ಯಾಯದಡಿಯಲ್ಲಿ ನನಗೆ ಟಿಕೆಟ್ ನೀಡಿ ಎಂದು ಕೇಳುತ್ತಿದ್ದೇನಷ್ಟೇ .... ವರಿಷ್ಟರು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಈಗಾಗಲೇ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಬೆಂಗಳೂರಿನಲ್ಲಿ ನಡೆದ ದಲಿತ ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪಿಸಿದ್ದು ನಾನು ಆಕಾಂಕ್ಷಿ ಎನ್ನುವುದು ವರಿಷ್ಠರಿಗೆ ಹಲವು ಮುಖಂಡರು ತಿಳಿಸಿದ್ದಾರೆ ಅದೇ ರೀತಿ ನನ್ನ ಪಕ್ಷ ಸಂಘಟನೆ ಮತ್ತು ಪಕ್ಷ ನಿಷ್ಠೆಯ ಬಗ್ಗೆಯೂ ವರಿಷ್ಠರು ಮಾಹಿತಿಯನ್ನು ಪಡೆದಿದ್ದಾರೆ ಎ.ಜೆ ಸದಾಶಿವ ಆಯೋಗದ ಅನುಷ್ಠಾನದ ನೀತಿಯಂತೆ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು, ಜಾತ್ಯಾತೀತ ನೆಲೆಗಟ್ಟಿನಲ್ಲಿ ಇರುವಂತಹ ಜಾತ್ಯಾತೀತ ಜನತಾದಳ ಸೂಕ್ತ ತೀರ್ಮಾನಗಳನ್ನು ಕೈಗೊಂಡು ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ತಿಳಿಸಿದರು.
ತಾಲೂಕು ಮಾದಿಗ ಜನಾಂಗದ ಸಂಚಾಲಕ ನಾಗರಾಜು ಮಾತನಾಡಿ 96 ಜನಾಂಗವನ್ನು ಎಸ್ಸಿ ಅಡಿಯಲ್ಲಿ ತಂದಿದ್ದು ಇದರಲ್ಲಿ ಹೆಚ್ಚಾಗಿರುವಂತಹ ಮಾದಿಗರಿಗೆ ಅನ್ಯಾಯವಾಗುತ್ತಿದ್ದು ಜೆಡಿಎಸ್ ಪಕ್ಷದಲ್ಲಿ ವರಿಷ್ಠರು ನ್ಯಾಯ ಒದಗಿಸಬೇಕು ಎಂದರು.
ಸಭೆಯಲ್ಲಿ ಮಾದಾರಾ ಜಾಗೃತಿ ರಾಜ್ಯ ಸಂಘದ ಸಂಚಾಲಕ ತಿಮ್ಮರಾಜು, ತಾಲೂಖು ಅಧ್ಯಕ್ಷ ಬಸವರಾಜು, ದಲಿತ ಸಂಘರ್ಷ ಸಂಚಾಲಕ ಸಿದ್ದರಾಮಯ್ಯ, ದಲಿತ ಸಂರಕ್ಷಣಾ ಸಂಘದ ಜಿಲ್ಲಾ ಸಂಚಾಲಕ ಟಿ.ಸಿ ರಾಮಕೃಷ್ಣಯ್ಯ, ಮುಖಂಡರಾದ ಕುರುಡಯುಗಾನಹಳ್ಳಿ ದೊಡ್ಡನಾಗಪ್ಪ, ಕಾಮರಾಜನಹಳ್ಳಿ ನಾರಾಯಣಪ್ಪ, ಪುರವರ ಜಿ.ವಿ ರಾಜು, ಹರೀಶ್, ವೆಂಕಟೇಶ್ ಸೇರಿದಂತೆ ಇತರರು ಇದರು.
Comments