ಅಪ್ಪಯ್ಯಣ್ಣ ವಿರುದ್ಧ ಸಿಡಿದೆದ್ದ ಜೆಡಿಎಸ್ ಮುಖಂಡರು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನನಗೆ ಟಿಕೆಟ್ ನೀಡುತ್ತೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ಜಿಪಂ ಸದಸ್ಯ ಹಾಗೂ ಬಮೂಲ್ ಅಧ್ಯಕ್ಷ ಅಪ್ಪಯ್ಯಣ್ಣ ವಿರುದ್ಧ ಜೆಡಿಎಸ್ ಮುಖಂಡರು ಸಿಡಿಮಿಡಿಗೊಂಡಿದ್ದಾರೆ.
ದೊಡ್ಡಬಳ್ಳಾಪುರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್ ಡಿಕೆಯಿಂದಲೇ ಘೋಷಣೆಯಾಗಿರುವ ಬಿ.ಮುನೇಗೌಡ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಆದ್ರೆ ಮುನೇಗೌಡರ ವಿರುದ್ಧ ಅಪ್ಪಯ್ಯಣ್ಣ ರೆಬೆಲ್ ಆಗಿದ್ದು, ಟಿಕೆಟ್ ನನಗೆ ಕೋಡ್ತಾರೆ ಎನ್ನುತ್ತಿದ್ದಾರೆ. ಈ ಹೇಳಿಕೆಯಿಂದ ಜೆಡಿಎಸ್ ಹಿರಿಯ ಮುಖಂಡರು ಗರಂ ಆಗಿದ್ದು, ಅಪ್ಪಯ್ಯಣ್ಣ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅಪ್ಪಯ್ಯಣ್ಣ ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ಧ ರೆಬೆಲ್ ಆಗಿರೋದರ ಬಗ್ಗೆ ದೊಡ್ಡಬಳ್ಳಾಪುರ ಜೆಡಿಎಸ್ ತಾಲೂಕು ಅಧ್ಯಕ್ಷರು, ನಗರಸಭೆ ಸದಸ್ಯರು ಗರಂ ಆಗಿದ್ದಾರೆ. ಹೀಗಾಗಿ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಪ್ಪಯ್ಯಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರೇ ಮುನೇಗೌಡರನ್ನ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ದಾರೆ. ಆದ್ರೆ ಅಪ್ಪಯ್ಯಣ್ಣ ರಾಜ್ಯಾಧ್ಯಕ್ಷರ ಮಾತಿಗೂ ಗೌರವ ಕೊಡದೇ ರೆಬೆಲ್ ಆಗಿ ವರ್ತನೆ ಮಾಡ್ತಿರೋದು ಸರಿಯಲ್ಲ. ಜತೆಗೆ ಮುನೇಗೌಡರು ಜೆಡಿಎಸ್ ಪಕ್ಷವನ್ನ ಹಳ್ಳಿ ಹಳ್ಳಿಯಲ್ಲಿ ಕಟ್ಟುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೂ ಅಪ್ಪಯ್ಯಣ್ಣರನ್ನ ಆಹ್ವಾನ ಮಾಡಿದ್ದರೂ ಬರುತ್ತಿಲ್ಲ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
Comments