ನಂದಿ ಜಾತ್ರೆಯಲ್ಲೂ ಗೋವಿನ ರಕ್ಷಣೆಗಾಗಿ ಅಭಯಾಕ್ಷರ ಸಂಗ್ರಹಣೆ
ನಂದಿಬೆಟ್ಟದ ತಪ್ಪಲಿನಲ್ಲಿರುವ ನಂದಿಗ್ರಾಮದ ಭೋಗನಂದೀಶ್ವರನಿಗೆ ಇಂದು ಜಾತ್ರೆಯ ಸಂಬ್ರಮ, ವಿಜೃಂಭಣೆಯಿಂದ ಇಂದು ನಡೆದ ಭೋಗನಂದೀಶ್ವರನ ರಥೋತ್ಸವಕ್ಕೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಸುತ್ತಮುತ್ತಲಿನ ಗ್ರಾಮಸ್ತರು ಬಂದು ಭಾಗವಹಿಸಿದ್ದರು. ಯುವ ಬ್ರಿಗೇಡ್ ಕಾರ್ಯಕರ್ತರು ಇಲ್ಲೂ ಹಾಜರಿದ್ದು ಸಾರ್ವಜನಿಕರಿಗೆ ಗೋರಕ್ಷಣೆಯ ಕುರಿತು ಮಾಹಿತಿ ನೀಡಿ ಸಾರ್ವಜನಿಕರಿಂದ ಅಭಯಾಕ್ಷರಕ್ಕೆ ಸಹಿ ಪಡೆದರು.
Comments