ಬಡವರ ಕೃತಜ್ಞತೆಗೆ ಕಂಬನಿ ಮಿಡಿದ ಎಚ್ ಡಿ ಕುಮಾರಸ್ವಾಮಿ
ಈ ಹಿಂದೆ ನೆರವು ಪಡೆದು ಕೊಂಡು ತಮ್ಮ ಮಗಳನ್ನು ಉಳಿಸಿಕೊಂಡಿದ್ದ ತಂದೆ-ತಾಯಿ ಕುಮಾರಣ್ಣನ ಕಾರ್ಯ ವೈಖರಿಯನ್ನು ಕೊಂಡಾಡಿದರು. ಹೊಸ ಕೋಟೆಯ ಕಾರು ಚಾಲಕ ಸಂಪಗಿ ಮತ್ತು ಸಂದ್ಯಾ ದoಪತಿಯ 11 ವರ್ಷದ ಮಗಳು ಮೋನಿಕಾ ಗೆ ರೋಗ ನಿರೋಧಕ ಶಕ್ತಿ ಇರಲಿಲ್ಲ. ಎಷ್ಟೇ ಚಿಕಿತ್ಸೆ ಕೊಡಿಸಿದರು ಏನು ಪ್ರಯೋಜನವಾಗಿರಲಿಲ್ಲ.
ಇದರಿಂದ ನೊಂದ ಕುಟುಂಬ ಆತ್ಮ ಹತ್ಯೆಗೆ ಯತ್ನಿಸಿದೆ. ನಂತರ ಬೆಂಗಳೂರಿಗೆ ಬಂದು ಎಲ್ಲ ಗಣ್ಯರ ಹಾಗು ಅಧಿಕಾರಿಗಳ ಮನೆಗೆ ಹೋಗಿ ಧನ ಸಹಾಯ ಕೇಳಿದ್ದಾರೆ. ಆದರೆ ಅವರು 30 ಲಕ್ಷ ರೂ ಖರ್ಚು ಮಾಡಬೇಕೆಂದು, ಯಾರು ಇವರ ಸಹಾಯಕ್ಕೆ ಬಾರದ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಯವರ ಮನೆಗೆ ಹೋಗಿ ಹಣ ಸಹಾಯ ಕೇಳಿದ್ದಾರೆ. ಇವರನ್ನು ಕಂಡು ಕುಮಾರಣ್ಣ ಏನು ನಿಮ್ಮ ಸಮಸ್ಯೆ ಎಂದು ಕೇಳಿ ಅವರ ಮಗಳಿಗೆ ವಿದೇಶದಿಂದ ಡಾಕ್ಟರ್ ನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದ ದಂಪತಿ ಕುಮಾರಣ್ಣ ನೀಡಿದ ನೆರವಿನ ಬಗ್ಗೆ ಎಲ್ಲರ ಮುಂದೆ ಪ್ರಸ್ತುತಪಡಿಸಿ ಕುಮಾರಣ್ಣ 'ದೇವರು' ಇಂತಹ ದೇವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಬಡವರಿಗೆ ಕಷ್ಟ ಬಂದಾಗ ನೆರವಿಗೆ ಬರುತ್ತಾರೆ ಎಂದು ಎಚ್ ಡಿಕೆ ಜನಸ್ಪಂದಿ ಕಾರ್ಯವನ್ನು ಕೊಂಡಾಡಿದರು. ನೆರವು ಪಡೆದು ಕೊಂಡ ಕುಟುಂಬ ತಮನ್ನು ಹೊಗಳುವ ಸಂದರ್ಭದಲ್ಲಿ ಎಚ್ ಡಿಕೆ ಭಾವುಕರಾದರು.
Comments