ಜೆಡಿಎಸ್ ಜಿಲ್ಲಾ ಅಧ್ಯಕ್ಷರಿಂದ ಕಾರ್ಯಕರ್ತರ ನಿರ್ಲಕ್ಷ್ಯ, ಕುಟುಂಬ ರಾಜಕಾರಣಕ್ಕೆ ಒತ್ತು ...ಚುನಾವಣೆಯಲ್ಲಿ ನನಗೇ ಟಿಕೆಟ್ ಅಪ್ಪಯ್ಯಣ್ಣ
ಪಕ್ಷದಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುನೇಗೌಡರ ನಡವಳಿಕೆಯಿಂದ ಬೇಸರಗೊಂಡಿರುವ ವರಿಷ್ಠರು ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ನನ್ನ ಹೆಸರನ್ನು ಘೋಷಿಸಲಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಅಪ್ಪಯ್ಯಣ್ಣ ಹೇಳಿದರು. ಅಧ್ಯಕ್ಷನಾಗಿ ಮೂರು ವರ್ಷದಿಂದ ೩ಜಿಲ್ಲೆಗಳ ೧೨ ತಾಲ್ಲೂಕುಗಳ ರೈತರೊಂದಿಗೆ ಸಂಪರ್ಕ ಹೊಂದಿದ್ದೇನೆ, ಹೊರಗಿನಿಂದ ಬಂದ ಮುನೇಗೌಡರು ಮೂಲ ಕಾರ್ಯಕರ್ತರನ್ನು ನಿರ್ಲಕ್ಷಿಸಿ ತಮ್ಮ ಹಿಂಬಾಲಕರಿಗೆ ಪಕ್ಷದಲ್ಲಿ ಸ್ಥಾನ ನೀಡುತ್ತಿದ್ದಾರೆ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂದು ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಕಾರ್ಯಕರ್ತರಲ್ಲಿ ಬಿರುಕು ಮೂಡುವಂತೆ ಮಾಡಿ, ಸದಸ್ಯರಲ್ಲಿ ಬಂಡಾಯ ಸೃಷ್ಟಿಸಿ, ಅಧ್ಯಕ್ಷಸ್ಥಾನ ಕೈತಪ್ಪುವಂತೆ ಮಾಡಿದ್ದರು. ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀರಾಮಪ್ಪ ಮಾತನಾಡಿ ಮುನೇಗೌಡರ ಕುಟುಂಬ ರಾಜಕಾರಣವನ್ನು ಟೀಕಿಸಿದರು. ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಬಮೂಲ್ ನೌಕರರ ಸಂಘದ ಅಧ್ಯಕ್ಷ ರುದ್ರಪ್ಪ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಪುಟ್ಟಬಸವರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ನರಸಿಂಹಪ್ಪ, ನಗರಸಭೆ ಸದಸ್ಯ ಮಲ್ಲೇಶ್, ಕುಂಟನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
Comments