ಮಾಡೇಶ್ವರ ಗ್ರಾಮದಲ್ಲಿ ಅವಳಿ ಕರುಗಳ ಜನನ..ನೂರಾರು ಜನರಿಂದ ವೀಕ್ಷಣೆ

13 Feb 2018 2:55 PM |
271 Report

ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಡೇಶ್ವರ ಗ್ರಾಮದ ಶಾನುಭೋಗರ ರಾಮಮೂರ್ತಿ ಎಂಬುವರ ಮನೆಯಲ್ಲಿ ಜರ್ಸಿ ಜಾತಿಗೆ ಸೇರಿದ ಹಸುವೊಂದು ಎರಡನೇ ಸೂಲಿನಲ್ಲಿ ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಶಿವರಾತ್ರಿಯ ಪುಣ್ಯದಿನದಂದು ಕರುಗಳ ಜನಿಸಿರುವುದರಿಂದ ಇವುಗಳಿಗೆ ಗಂಗೆ-ಗೌರಿ ಎಂದು ಹೆಸರಿಡಲಾಗಿದೆ. ಅಪರೂಪದ ಹಸು ಮತ್ತು ಕರುಗಳನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿನೀಡಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

Edited By

Ramesh

Reported By

Ramesh

Comments