ಬೆಳಿಗ್ಗೆ ಎದ್ದ ತಕ್ಷಣ ಯಾವುದನ್ನೂ ನೋಡಬಾರದು !

13 Feb 2018 1:07 PM | General
2596 0 Report

ಬೆಳಗ್ಗೆ ಎದ್ದ ತಕ್ಷಣ ಯಾವುದೊ ವಸ್ತು ಅಥವಾ ಪ್ರಾಣಿಯನ್ನು ನೋಡಿದರೆ ಇಡೀ ದಿನ ಯಾವುದೇ ಅನಾವುತಗಳು ನಡೆದರೂ ಅದಕ್ಕೆ ಅವುಗಳನ್ನೇ ಹೊಣೆ ಮಾಡುತ್ತಾರೆ ಅದರಿಂದ ಸಾಧ್ಯವಾದಷ್ಟು ಈ ಕೆಳಕಂಡ ಕೆಲವು ವಸ್ತುಗಳನ್ನು ಮತ್ತು ಪ್ರಾಣಿಗಳನ್ನು ನೋಡದೆ ಇರುವುದು ಉತ್ತಮ.

ಗಂಡಸರು ಕೂದಲು ಬಿಟ್ಟುಕೊಂಡ ಹೆಂಗಸರ ಮುಖವನ್ನು ನೋಡಬಾರದಂತೆ . ಹಣೆಯಲ್ಲಿ ಕುಂಕುಮ ಇರದ ಹೆಣ್ಣುಮಕ್ಕಳನ್ನು ನೋಡಬಾರದೆಂದು ಹಿರಿಯರು ಹೇಳುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಕ್ರೂರಪ್ರಾಣಿಗಳನ್ನ ನೋಡಬಾರದು ಎಂದು ಮತ್ತೆ  ಹೇಳುತ್ತಾರೆ.

ಬೆಳಗ್ಗೆ ಎದ್ದ ತಕ್ಷಣ  ಕುರುಡರನ್ನ ವಿಧವೆಯರನ್ನ ನೋಡುವುದು ಅಶುಭಕ್ಕೆ ಸಮ ಎಂದು ಹೇಳುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ನೋಡುವುದು ಅಶುಭ ಎಂದು ಕೆಲವರು ಹೇಳುತ್ತಾರೆ ಮತ್ತೆ ಕೆಲವರು ಹೊರಗಡೆ ಹೋಗುವಾಗ ಯಾರಾದರೂ ಎಲ್ಲಿಗೆ ಹೋಗುವುದು ಎಂದು ಕೇಳಿದರೆ ಅಶುಭ ಎಂದು ಭಾವಿಸುತ್ತಾರೆ. ಮತ್ತೆ ಕೆಲವರು ದಾರಿಯಲ್ಲಿ ಹೋಗುವಾಗ ಯಾರಾದರೂ ಖಾಲಿ ಬಿಂದಿಗೆಯನ್ನ ತೆಗೆದುಕೊಂದು ಹೋದರೆ ಅಶುಭ ಎಂದು ಭಾವಿಸುತ್ತಾರೆ . ಒಟ್ಟಾರೆ ಹೇಳುವುದಾದರೆ ಅವರವರ ಆಚರಣೆ ನಂಬಿಕೆ ಅಭಿಪ್ರಾಯಕ್ಕೆ ತಕ್ಕಂತೆ ತಿಳಿದುಕೊಳ್ಳುವುದು ಉತ್ತಮ.

Edited By

venki swamy

Reported By

venki swamy

Comments

Upload

Upload News

Create

Create Community