ಮಹಾಶಿವರಾತ್ರಿ ಪ್ರಯುಕ್ತ ಚಂದ್ರಮೌಳೀಶ್ವರ, ಕಾಶಿ ವಿಶ್ವನಾಥ ದೇವಾಲಯಗಳಲ್ಲಿ ವಿಶೇಷ ಪೂಜೆ
ನಗರದ ತೇರಿನಬೀದಿಯಲ್ಲಿರುವ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ಪೂರ್ತಿ ಅಭಿಷೇಕ ಮತ್ತು ಪೂಜೆಗಳು, ರುದ್ರಾಭಿಷೇಕ, ನಾಲ್ಕು ಯಾಮಗಳ ಅಭಿಷೇಕ, ಸಂಜೆ 6ರಿಂದ 6-30ರ ವರೆಗೆ ಶ್ರೀ ಗಾಯತ್ರಿ ವಿಪ್ರ ಮಹಿಳಾ ಸಂಘದ ವತಿಯಿಂದ ಲಲಿತ ಸಹಸ್ರನಾಮ 6-30ರಿಂದ 7ರ ವರೆಗೆ ಭಕ್ತಿ ಗೀತೆಗಳು, ರಾತ್ರಿ ೭ರಿಂದ ಸುಗಮ ಸಂಗೀತ ಹಾಗೂ ಸ್ಪೂರ್ತಿ ಸಾಂಸ್ಕೃತಿಕ ಕ್ರೀಡಾ ಅಕಾಡಮಿ, ಯವರಿಂದ ಭರತ ನಾಟ್ಯ ಏರ್ಪಡಿಸಿರುತ್ತದೆ, ಸಂಜೆ 5ರಿಂದ ಮುಂಜಾನೆ 5ರವರೆಗೆ ಜಪಪಾರಾಯಣವಿರುತ್ತದೆ.
ದೊಡ್ಡಬಳ್ಳಾಪುರ ಕೊಂಡಸಂದ್ರ ದಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಮಿತಿಯವರಿಂದ ಬೆಳಿಗ್ಗೆ ಸರ್ಪಭೂಷಣ ಮಹಾ ಗಣಪತಿ ಅಭಿಷೇಕ ನಂತರ ಮಹಾನ್ಯಾಸಪೂರ್ವಕ ರುದ್ರಾಭಿಷೇಕವಿರುತ್ತದೆ, ಜಾಗರಣೆ ಪ್ರಯುಕ್ತ ರಾತ್ರಿ 9 ಘಂಟೆಗೆ ಸುತ್ತಮುತ್ತಲಿನ ಹಳ್ಳಿಗಳ ಭಜನಾ ಮಂಡಲಿಗಳಿಂದ ಅಖಂಡ ಭಜನಾ ಕಾರ್ಯಕ್ರಮ ಏರ್ಪಡಿಸಿರುತ್ತದೆ, ಬೆಳಿಗ್ಗೆ 5ಕ್ಕೆ ವಿಷೇಶ ಅಲಂಕಾರದೊಂದಿಗೆ ಪೂಜೆ ಇರುತ್ತದೆ.
Comments