ಎಂ ಸಿದ್ದರಾಮಯ್ಯನವರನ್ನು ಹಿಗ್ಗಾಮುಗ್ಗಾ ಹೀಯಾಳಿಸಿದ ದೇವೇಗೌಡ್ರು

10 Feb 2018 6:19 PM |
456 Report

ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರದ ಹಬ್ಬರವು ಸಹ ಜೋರಾಗೆ ಇರುತ್ತದೆ. ಅದೇ ರೀತಿ ಜೆಡಿಎಸ್ ಕಾರ್ಯಕರ್ತರುಗಳಿಗೆ ಎಚ್ ಡಿ ದೇವೇಗೌಡರು ಸಕ್ರಿಯರಾಗುವಂತೆ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ ಈ ವೇಳೆ ಸಿಎಂ ಸಿದ್ದರಾಮಯ್ಯನವರು ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ಸಿಎಂ ಸಿದ್ದರಾಮಯ್ಯನವರೇ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವುದಂತೂ ಖಚಿತ ಎಂದು ಸಿಎಂ ವಿರುದ್ಧ ಎಚ್ ಡಿಡಿ ಹರಿಹಾಯ್ದರು.

ಕೆಂಗೇರಿ ಉಪನಗರ ಕ್ಲಬ್ ಬಳಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ಶಕ್ತಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆಯೋ ಅದೇ ಶಕ್ತಿ ನಿಮ್ಮನ್ನು ಆ ಸ್ಥಾನದಿಂದ ಕಿತ್ತೆಸೆಯುವಂತೆ ಮಾಡುತ್ತೇವೆ. ಅಧಿಕಾರದಿಂದ ನಿಮ್ಮನ್ನೇ ಕೆಳಗಿಳಿಸಿಯೇ ಇಳಿಸುವೆ ಎಂದು ಶಪಥ ತೊಟ್ಟಿದ್ದಾರೆ.ಸಿದ್ದರಾಮಯ್ಯನವರೇ ನೀವೇನು ಮಾಡಿದ್ದೀರಿ ಎಂಬುದರ ಬಗ್ಗೆ ಪೂರ್ಣ ದಾಖಲೆಗಳ ಸಮೇತ ಸಾಭೀತು ಪಡಿಸುತ್ತೇವೆ. ಖಜಾನೆ ಲೂಟಿ ಮಾಡುತ್ತಿದ್ದೀರಿ, ಇನ್ನೇನು ನಿಮ್ಮ ಅಧಿಕಾರದ ಅವಧಿ ಮುಗಿಗುತ್ತಾ ಬಂತಲ್ಲ. ಇನ್ನು ಹೆಚ್ಚು ದಿನಗಳಿಲ್ಲ ಕೇವಲ 120 ದಿನ ಮಾತ್ರ ಇದೆ ನೆನಪಿಟ್ಟುಕೊಳ್ಳಿ. ಸಿದ್ದರಾಮಯ್ಯ ಕೈ ಎತ್ತೆತ್ತಿ ಭಾಷಣ ಮಾಡ್ತಾರೆ ನೋಡಿದ್ದೇನೆ. ನಂಗೂ ಡ್ಯಾನ್ಸ್ ಮಾಡೋಕೆ ಬರುತ್ತೆ. ದೊಡ್ಡ ಸತ್ಯವಂತ ಸಿದ್ದರಾಮಯ್ಯ ಇವರ ಮನೆಯ ಮುಂದೆನೇ ಸತ್ಯ ಹರಿಶ್ಚಂದ್ರ ಹಾದುಹೋಗಿದ್ದಾರೆ ಎಂದು ಕಿಡಿಕಾರಿದರು. 

ಸಿದ್ದರಾಮಯ್ಯನವರಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿದ್ದೆ ನಾನು ಜೀವನದಲ್ಲಿ ಮಾಡಿದ ಮಹಾ ಪಾಪದ ಕಾರ್ಯ.
ಇಂತಹ ಕೀಳುಮಟ್ಟದ ರಾಜಕಾರಣಿ ಎಂದ ಅವರು, ಸೋನಿಯಾ ಗಾಂಧಿ ಶಕ್ತಿ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ನಲ್ಲಿ ಸಿಎಂ ಅಧಿಕಾರದ ದುರಹಂಕಾರದಿಂದ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯೆಕ್ತಪಡಿಸಿದರು. ಯಾರ್ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಾರೆ.? ಅಂತ ದುರಹಂಕಾರದಿಂದ ಬೀಗುತ್ತಿದ್ದೀರಾ, ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಾಗೂ ಕೆಂಪಣ್ಣ ಆಯೋಗ ವಿಚಾರ ಏನಾಯಿತು.? ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ನಾಚಿಕೆಯಾಗೋಲ್ವ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯದ ಜನರ ಮನಗೆಲ್ಲುವ ಸಂದರ್ಭದಲ್ಲಿ ನಾನು ನಿಮಗೆ ಬೇಕಾಗಿದ್ದೆ. ಹಾಗಾಗಿ ಮಂಗಳೂರಿನಲ್ಲಿ ನಡೆದ ರಾಣಿ ಅಬ್ಬಕ್ಕ ಜಯಂತಿ ವೇಳೆ ಬೇಕಾಗಿದ್ದೆಯಷ್ಟೇ. ಆದರೆ ಮುಖ್ಯಮಂತ್ರಿಯಾದ ಬಳಿಕ ಶ್ರವಣಬೆಳಗೊಳದ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಈ ಅಧಿಕಾರ ಎಷ್ಟು ದಿನ ಇರುತ್ತೆ ನಾನು ನೋಡುತ್ತೇನೆ. ನೀವು ಮಾಡಿರೋ ಪಾಪದ ಕೊಡ ತುಂಬಿದೆ ಇನ್ನು ಹೆಚ್ಚು ದಿನಗಳೇನು ಇಲ್ಲ ತಿಳಿದುಕೊಳ್ಳಿ ಎಂದು ಟಾಂಗ್ ನೀಡಿದರು.

 

 

Edited By

hdk fans

Reported By

hdk fans

Comments