ಜೆಡಿಎಸ್ ನಗರ ಘಟಕ ಕಾರ್ಯಾಧ್ಯಕ್ಷರಾಗಿ ಪಿಸಿಎಲ್, ಅಧ್ಯಕ್ಷರಾಗಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಖಿಲೇಶ್ ಆಯ್ಕೆ





ದೊಡ್ಡಬಳ್ಳಾಪುರ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಮುನೇಗೌಡ ರವರು ದೊಡ್ಡಬಳ್ಳಾಪುರ ನಗರ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಘೋಷಿಸಿದರು, ಪ್ರಮುಖವಾಗಿ ನಗರದ ಕಾರ್ಯಾಧ್ಯಕ್ಷರಾಗಿ ನಗರಸಭಾ ಸದಸ್ಯ ಶ್ರೀ ಪಂಜಿನಿ ಪಿ.ಸಿ. ಲಕ್ಷ್ಮೀನಾರಾಯಣ್, ಅಧ್ಯಕ್ಷರನ್ನಾಗಿ ನಗರಸಭಾ ಸದಸ್ಯ ಶ್ರೀ ವಿ.ಎಸ್.ರವಿಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಹೆಚ್.ವಿ. ಅಖಿಲೇಶ್ ರವರನ್ನು ನೇಮಕ ಮಾಡಿದರು. ನಗರಸಭಾ ಸದಸ್ಯರಾದ ಶ್ರೀ ಕೆಂಪರಾಜು, ಶ್ರೀ ಶಿವಕುಮಾರ್, ಶ್ರೀಮತಿ ಸುಶೀಲ ರಾಘವ, ಶ್ರೀ ಗಾಯತ್ರಿಪೀಠ ಮಿತ್ರ ಬಳಗದ ಸದಸ್ಯರು ಮತ್ತು ಪಂಜಿನಿ ಕುಟುಂಬದವರು ಹಾಜರಿದ್ದು ಅಭಿನಂದಿಸಿದರು.
Comments