ಮತ್ತೆ ಶಿವರಾಜ್ ಕುಮಾರ್ ಜೊತೆ ಸೇರಿ ಉಪ್ಪಿ 'ಓಂ 2' ಸಿನಿಮಾ ಮಾಡ್ತಾರಾ..?

10 Feb 2018 11:31 AM |
2090 Report

' ಓಂ ' ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ವಿಭಿನ್ನ ಮೈಲಿಗಲ್ಲಿನ ಸಿನಿಮಾ ಎಂದರೆ ತಪ್ಪಿಲ್ಲ . (ಅಂಡರ್ ವರ್ಲ್ಡ್ ) ಭೂಗತ ಜಗತ್ತಿನ್ನು ಪರಿಚಯಿಸಿದ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನಕ್ಕೆ ಬೆಲೆ ಸಿಕ್ಕಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಗೆ ಮತ್ತಷ್ಟು ಹೆಸರು ತಂದು ಕೊಟ್ಟ ಸಿನಿಮಾ 'ಓಂ'.

ಆದರೆ ಈಗ 'ಓಂ 2' ಬರುತ್ತಾ ಎಂಬ ಕುತೂಹಲ ಹುಟ್ಟಿದೆ. 'ಓಂ 2' ಸಿನಿಮಾದ ಬಗ್ಗೆ ಫೇಸ್ ಬುಕ್ ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ನಟ ಉಪೇಂದ್ರ. ಉಪೇಂದ್ರ ನಿನ್ನೆ ಶಿವಣ್ಣನೊಂದಿಗೆ ತೆಗೆದ ಒಂದು ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದರು. ಅದರ ಜೊತೆಗೆ 'Om 2 coming ?' ಎಂದು ಬರೆದು ಎಲ್ಲರ ತಲೆಗೆ ಹುಳ ಬಿಟ್ಟಿದ್ದರು. ನಟ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಗೆ ಒಂದು ಹೊಸ ಟಾಕ್ ಶೋ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದ ಮೊದಲ ಅತಿಥಿ ಆಗಿ ನಟ ಉಪೇಂದ್ರ ಭಾಗಿಯಾಗಿದ್ದಾರೆ. ನಂ 1 ಯಾರಿ ವಿತ್ ಶಿವಣ್ಣ ? ಸ್ಟಾರ್ ಸುವರ್ಣ ವಾಹಿನಿಯ ಹೊಸ ಟಾಕ್ ಶೋ. ತೆಲುಗಿನಲ್ಲಿ ಇದೇ ಕಾರ್ಯಕ್ರಮವನ್ನು ನಟ ರಾಣಾ ದಗ್ಗುಬಾಟಿ ನಡೆಸಿಕೊಂಡುತ್ತಿದ್ದಾರೆ. ಕನ್ನಡದ ಈ ಹೊಸ ಕಾರ್ಯಕ್ರಮದ ಮೂಲಕ ಮತ್ತೆ ಶಿವಣ್ಣ ಕಿರುತೆರೆಗೆ ಮರಳಿದ್ದಾರೆ. ಈ ಕಾರ್ಯಕ್ರಮದ ಶೂಟಿಂಗ್ ವೇಳೆ ಉಪೇಂದ್ರ, ಶಿವಣ್ಣನ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 'Om 2 coming ?' ಎಂದು ಉಪ್ಪಿ ಬರೆದಿದ್ದಾರೆ. ಇದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತೆ ಆಗಿದೆ.

Edited By

Uppendra fans

Reported By

upendra fans

Comments