ಗ್ರಾಮೀಣ ಪ್ರದೇಶದವಿವರಿಗೆ ಎಲ್ಲಾ ಸೌಲಭ್ಯ ತಲುಪಬೇಕು: ಡಾ. ಜಿ ಪರಮೇಶ್ವರ್

ಕೊರಟಗೆರೆ ಫೆ.:- ಭಾರತದಲ್ಲಿ ಬಹುತೇಕ ಜನರು ಗ್ರಾಮೀಣ ಪ್ರದೇಶದಲ್ಲೇ ವಾಸ ಮಾಡುತ್ತಿದ್ದು, ದೇಶದ ಅಭಿವೃದ್ದಿಯಾಗಬೇಕಾದರೆ ಗ್ರಾಮೀಣ ಪ್ರದೇಶಗಳು ನಗರದ ಸೌಲಭ್ಯಗಳನ್ನು ಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶರ್ ಹೇಳಿದರು. ತಾಲ್ಲೂಕಿನ ಕಸಬಾ ಹೋಬಳಿಯ ಕಲ್ಕೆರೆ ಗ್ರಾಮದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯ 1 ಕೋಟಿ ರೂಗಳ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಭಾರತದಲ್ಲೂ ದೇಶದ ಬಹುತೇಕ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ, ಮಹಾತ್ಮಗಾಂಧಿಜಿ ಆಶಯ ಪೂರ್ಣಗೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜನರು ನೆಮ್ಮದಿಯಿಂದ ಬಾಳಬೇಕಾದರೆ ನಗರದಲ್ಲಿ ದೊರಕುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಒದಗಿಸುವ ಜವಬ್ದಾರಿ ಎಲ್ಲಾ ಸಕರ್ಾರದ ಮೇಲಿದ್ದು, ಇದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭಾ ಸದಸ್ಯರಿಗೆ 4 ಗ್ರಾಮಗಳನ್ನು ವಿಧಾನಪರಿಷತ್ ಸದಸ್ಯರಿಗೆ 2 ಗ್ರಾಮಗಳನ್ನು ಗ್ರಾಮ ವಿಕಾಸ್ ಯೋಜನೆಯಲ್ಲಿ ಅಭಿವೃದ್ದಿಗೊಳಿಸಲು 1ಕೋಟಿ ರೂಗಳ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಬಿಡುಗಡೆಯಾಗಿರುವ ಹಣವನ್ನು ಜಾಗರುಕತೆಯಾಗಿ ಉಪಯೋಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ಗ್ರಾ.ಪಂ ಅಧ್ಯಕ್ಷೆ ಗೀತಾದೊಡ್ಡಯ್ಯ, ತಾ.ಪಂ ಇಓ ಮೋಹನ್ಕುಮಾರ್, ಪಿಡಿಓ ಪೃಥ್ವೀಭಾ, ಮಾಜಿ ಗ್ರಾ.ಪಂ ಅಧ್ಯಕ್ಷ ಭಕ್ತರಹಳ್ಳಿ ಸಿದ್ದಲಿಂಗಪ್ಪ, ಪುಟ್ಟಹರಿಯಪ್ಪ, ಚಿಕ್ಕರಂಗಯ್ಯ, ಕುರುಡಗನಹಳ್ಳಿ ರಂಗಯ್ಯ, ನರೇಂದ್ರಬಾಬು ಸೇರಿದಂತೆ ಇನ್ನಿತರರು ಹಾಜರಿದ್ದರು.
Comments