ಮಹಿಳೆಯರಿಗೆ ಸೌವಲತ್ತುಗಳ ಬಗ್ಗೆ ಮಾಹಿತಿ ನೀಡಿ

ಕೊರಟಗೆರೆ ಫೆ;- ಸರ್ಕಾರದ ಕಾರ್ಯಕ್ರಮಗಳನ್ನು ಇಲಾಖೆವತಿಯಿಂದ ಮಹಿಳೆಯರಿಗೆ ದೊರೆಯುವ ಸೌವಲತ್ತು ಮತ್ತು ಯೋಜನೆಗಳ ಬಗ್ಗೆ ಮಹಿಳಾ ಕಾಂಗ್ರೆಸ್ ಪದಾದಿಕಾರಿಗಳು ಮನೆ ಮನೆಗೆ ಹೋಗಿ ಮಾಹಿತಿ ನೀಡಬೇಕು ಎಂದು ಭಾರತ್ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ಕೆ.ಎಂ.ಸುಶೀಲ ಮನವಿ ಮಾಡಿದರು. ಪಟ್ಟಣದ ರಾಮೇಶರ ದೇವಾಲಯದಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಮಹಿಳೆಯರು ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದರು ಈಗ ಕಾಲ ಬದಲಾಗಿದ್ದು ಎಲ್ಲೆಡೆ ತಮ್ಮ ಛಾಪು ಮೂಡಿಸುತ್ತಿದ್ದಾರೆ ಆದರೆ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸರ್ಕಾರಿ ಯೋಜನೆಗಳು ಸಮರ್ಪಕ ಬಳಕೆಯಾಗುತ್ತಿಲ್ಲ ಆದ್ದರಿಂದ ಕಾಂಗ್ರೆಸ್ ಸರ್ಕಾರದ ಮಹಿಳೆಯರಿಗೆ ಅಭಿವೃದ್ದಿಗಾಗಿ ಅನೇಕ ಸೌಲಭ್ಯಗಳ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಮಹಿಳಾ ಕಾಂಗ್ರೆಸ್ ಘಟಕದ ಪದಾದಿಕಾರಿಗಳು ಮಾಡುವಂತೆ ಸೂಚಿಸಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಮಾತನಾಡಿ ತಾಲೂಕಿನಲ್ಲಿ ಮಹಿಳಾ ಘಟಕದ ಪ್ರತಿಯೊಬ್ಬ ಕಾರ್ಯಕತರ್ೆಯರೂ ಸಂಪೂರ್ಣ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತ್ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷೆಯನ್ನಾಗಿ ಕೆ.ಮಂಜುಳ, ಕಾರ್ಯದಶರ್ಿಯಾಗಿ ಚಂದ್ರರೇಖಾ ಆಯ್ಕೆ ಮಾಡಿ ಸಕರ್ಾರ ಕಾಮರ್ಿಕ ಇಲಾಖೆತಿಯಿಂದ ರೂಪಿಸಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪದಾದಿಕಾರಿಗಳನ್ನು ನೇಮಕ ಮಾಡುವ ಮೂಲಕ ಗ್ರಾಮೀಣ ಮಹಳೆಯರಿಗೂ ಅರಿವು ಮೂಡಿಸಲು ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಉಪಾಧ್ಯಕ್ಷ ನರಸಮ್ಮ, ಮಹಿಳಾ ಕಾರ್ಯಕರ್ತೆಯರಾದ ಸೌಮ್ಯಭಟ್, ಬಷೀರಾ, ಸುಶೀಲಾ, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್, ಮುಖಂಡರಾದ ಮಕ್ತಿಯಾರ್, ಅಶ್ವತ್ಥನಾರಾಯಣರಾಜು, ಕಣಿವೆ ಹನುಮಂತರಾಯಪ್ಪ ಸೇರಿದಂತೆ ಇನ್ನಿತರ ಮಹಿಳಾ ಕಾರ್ಯಕರ್ತಯರು ಇದ್ದರು(ಚಿತ್ರ ಇದೆ)
Comments