ಹನುಮಂತನಾಥಸ್ವಾಮೀಜಿ ಪಾದಯಾತ್ರೆಯ ಮೂಲಕ ಬಿಕ್ಷಾಟನೆ ಹನುಮಂತನಾಥಸ್ವಾಮೀಜಿ ಪಾದಯಾತ್ರೆಯ ಮೂಲಕ ಬಿಕ್ಷಾಟನೆ ಹನುಮಂತನಾಥಸ್ವಾಮೀಜಿ ಪಾದಯಾತ್ರೆಯ ಮೂಲಕ ಬಿಕ್ಷಾಟನೆ ಹನುಮಂತನಾಥಸ್ವಾಮೀಜಿ ಪಾದಯಾತ್ರೆಯ ಮೂಲಕ ಬಿಕ್ಷಾಟನೆ
ಕೊರಟಗೆರೆ ಫೆ. :- ಜಗತ್ತಿನಲ್ಲಿ ಧಾನಕ್ಕೆ ಶ್ರೇಷ್ಠ ಮಹತ್ವ ಇದೆ ಇದು ನಮ್ಮ ಸಂಸ್ಕೃತಿಯ ಪ್ರತೀತಿ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು. ತಾಲೂಕಿನ ಹಿರೇದೊಡ್ಡವಾಡಿ ಗ್ರಾಮದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠದ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆ ಪಾದಯಾತ್ರೆ ಬಿಕ್ಷಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತನ್ನಲ್ಲಿ ಹೇರಳವಾಗಿರುವಂತಹ ವಸ್ತುವನ್ನು ಉಳ್ಳವರಿಗೆ ನೀಡುವುದು ಧಾನವಲ್ಲ, ತನಗಾಗಿ ಇಟ್ಟುಕೊಂಡಿರುವ ವಸ್ತುವನ್ನು ನನ್ನಂತೆ ಅವರಿಗೂ ಸಿಗಲಿ ಎನ್ನುವ ಕಲ್ಪನೆಯೊಂದಿಗೆ ಫಲಾಪೇಕ್ಷೆಯಿಲ್ಲದೇ ತ್ಯಾಗದ ಮನೋಭಾವದಿಂದ ಮಾಡುವುದೇ ನಿಜವಾದ ಧಾನ ಇದನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದರು.
ಭಕ್ತವೃಂದದೊಂದಿಗೆ ಕೋಳಾಲ ಹೋಬಳಿಯ ಹಲವು ಗ್ರಾಮಗಳಿಗೆ ಶ್ರೀಗಳು ಪಾದಯಾತ್ರೆಯ ಮೂಲಕ ಬಿಕ್ಷಾಣೆ ಮಾಡಿದರು, ರೈತರು ತಾವು ಬೆಳೆದಿದ್ದ ರಾಗಿ, ಭತ್ತ,ಬೇಳೆ-ಕಾಳುಗಳು ಸೇರಿದಂತೆ ತರಕಾರಿಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿಎಸ್ಎಸ್ಎನ್ ಅಧ್ಯಕ್ಷ ರಾಮಾಂಜನಪ್ಪ, ಮುಖಂಡರಾದ ದುರ್ಗಪ್ಪ, ವಿಜಯಸಿಂಹ, ಮತ್ತುರಾಜು, ಶಿವರಾಜು, ಶ್ರೀನಿವಾಸಮೂರ್ತಿ ಸೇರಿದಂತೆ ಇತರರು ಶ್ರೀಗಳೊಂದಿಗೆ ಬಿಕ್ಷಾಟನೆ ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.( ಚಿತ್ರ ಇದೆ)
7ಕೊರಟಗೆರೆ ಚಿತ್ರ1:- ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಮೀಜಿ ಪಾದಯಾತ್ರೆಯ ಮೂಲಕ ಬಿಕ್ಷಾಟನೆ ಮಾಡಿದರು.
Comments