ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿಗಳು
ರಾಜ್ಯ ವಾಲೀಬಾಲ್ ಅಸೋಸಿಯೇಷನ್ ಮತ್ತು ಭುವನೇಶ್ವರಿ ಕನ್ನಡ ಸಂಘದಿಂದ ಫೆಬ್ರವರಿ 10 ಮತ್ತು 11 ರ ಶನಿವಾರ ಮತ್ತು ಭಾನುವಾರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿಗಳು ನಡೆಯಲಿದೆ. ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 4೦,೦೦೦ ಸಾವಿರ, ದ್ವಿತೀಯ ರೂ. 2೦,೦೦೦ ಸಾವಿರ, ಮೂರನೇ ಬಹುಮಾನವಾಗಿ ರೂ. 1೦,೦೦೦ ಸಾವಿರ ನೀಡಲಾಗುವುದು ಎಂದು ಸಂಘದ ತಾಲ್ಲೂಕು ಅಧ್ಯಕ್ಷರಾದ ನವೀನ್ ದೇವ್ ತಿಳಿಸಿದ್ದಾರೆ. ಟೂರ್ನಿಯನ್ನು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫುಲ್ಲಾಖಾನ್ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ವಹಿಸಲಿದ್ದಾರೆ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಬಮೂಲ್ ಅಧ್ಯಕ್ಷ ಎಚ್. ಅಪ್ಪಯ್ಯಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Comments