ಬೇಡದ ಸುದ್ಧಿಯನ್ನು ಹೈಲೈಟ್ ಮಾಡೋಬದ್ಲು, ನನ್ನ ಕನಸುಗಳನ್ನುಹೈಲೈಟ್ ಮಾಡಿ : ಎಚ್ ಡಿಕೆ

ಎಚ್ ಡಿ ಕುಮಾರ ಸ್ವಾಮಿಯವರು ಇತ್ತೀಚೆಗಷ್ಟೇ ಹೃದಯ ಶಸ್ತ್ರ ಚಿಕಿತ್ಸೆ ಪಡೆದುಕೊಂಡು ಇನ್ನು ಪೂರ್ತಿಯಾಗಿ ಇನ್ನು ಗುಣಮುಖರಾಗಿಲ್ಲ ಆದರೂ ಸಹ ರಾಜ್ಯದೆಲ್ಲೆಡೆ ಸಂಚರಿಸಿ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಅಭಿಮಾನಿಗಳ ಪಾಲಿಗೆ ಕುಮಾರಣ್ಣರಾಗಿದ್ದಾರೆ.
ರೈತರಿಗೆ ಆತ್ಮ ಸ್ಥೆರ್ಯ ತುಂಬುವ ಮೂಲಕ ಮಣ್ಣಿನ ಮಗ ನಾಗಿದ್ದರೆ.ಇವರು ಹೋದ ಕಡೆಯಲ್ಲೆಲ್ಲ ಜನ ಸಾಗರ ಹರಿದು ಬರುತ್ತದೆ. ಆದರೆ ಸಿಗುತ್ತಿರುವ ಪ್ರಚಾರದ ಪ್ರಮಾಣ ನೋಡಿದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಸಾಕಷ್ಟು ಕಡಿಮೆ ಇದೆ. ವಿವಾದದ ಹೇಳಿಕೆಗಳು ನೀಡಿದಾಗ ಕುಮಾರಸ್ವಾಮಿ ಅವರು ಆಗುವಷ್ಟು ಹೈಲೈಟ್ ತಮ್ಮ ಕನಸಿನ ಬಗ್ಗೆ, ಯೋಜನೆಗಳ ಬಗ್ಗೆ ಮಾತನಾಡುವಾಗ ಆಗುವುದಿಲ್ಲ ಎಂಬುದು ಅವರ ತಕರಾರು. ಅಲ್ಲದೆ ರಾಷ್ಟ್ರೀಯ ಪಕ್ಷಗಳು ಬೇಡದ ಮಾತುಗಳನ್ನು ಚರ್ಚಿಸಿ ರಾಜ್ಯದ ನೆಮ್ಮದಿ ಹಾಳು ಮಾಡುತ್ತಿವೆ. ಬೇಡದ ಸುದ್ದಿಯನ್ನು ಹೈ ಲೈಟ್ ಮಾಡುವ ಬದಲು ರಾಜ್ಯದ ಒಳಿತಿಗೆ ಜೆಡಿಎಸ್ ಪಕ್ಷದ ಯೋಜನೆಗಳನ್ನೂ ಜನರಿಗೆ ತಲುಪಿಸಿ ಎಂದು ಕಿವಿಮಾತೊಂದನ್ನು ಮಾಧ್ಯಮ ಮಿತ್ರರಿಗೆ ತಿಳಿ ಹೇಳಿದರು. ಕುಮಾರಸ್ವಾಮಿ ಆರೋಪ ಮಾಡುವುದಕ್ಕಷ್ಟೇ ಸರಿ, ವಿಚಾರ ಏನಿಲ್ಲ ಎಂಬ ಸಂದೇಶ ಜನರಿಗೆ ರವಾನೆ ಆಗುತ್ತದೆ. ತಮ್ಮ ಶ್ರಮ ಎಲ್ಲ ವ್ಯರ್ಥ ಆಗುತ್ತದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳು ಜನರಿಗೆ ತಲುಪಬೇಕು. ಆದರೆ ಅದು ಆಗುತ್ತಿಲ್ಲ ಎಂಬುದು ಅವರ ಅಳಲು. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಎಚ್ ಡಿಕೆ ಯಾಕೆ ಹೀಗೆ ಸಿಟ್ಟಾಗುತ್ತಿದ್ದಾರೆ ಎಂಬ ಪ್ರಶ್ನೆ ಗೆ ಕುಮಾರಣ್ಣನ ತೆರೆ ಎಳೆದರು.
Comments