ಬಿಎಸ್ಪಿ-ಜೆಡಿಎಸ್ ಮೈತ್ರಿ: ಯಾವ ಯಾವ ಕ್ಷೇತ್ರದಲ್ಲಿ ಸ್ಪರ್ಧೆ?
ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಈ ಮೈತ್ರಿ ಏರ್ಪಟ್ಟಿದ್ದು, ರಾಜ್ಯಾದ್ಯಂತ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಮತ್ತು ಮಾಯಾವತಿ ಜಂಟಿ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಮಧ್ಯೆ, 14 ಜಿಲ್ಲೆ 20 ಕ್ಷೇತ್ರಗಳನ್ನ ಜೆಡಿಎಸ್, ಬಿಎಸ್ಪಿ ಬಿಟ್ಟುಕೊಟ್ಟಿದೆ.
ದೆಹಲಿಯಲ್ಲಿ ಮೈತ್ರಿ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಮತ್ತು ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ ಅಧಿಕೃತವಾಗಿ ಘೋಷಣೆ ಮಾಡಿದರು.ಮೈತ್ರಿ ಪ್ರಕಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನೇತೃತ್ವದ ಜೆಡಿಎಸ್ 204 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಿಎಸ್ಪಿ 20 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲಿದ್ದಾರೆ. ಜೆಡಿಎಸ್ ಬಿಎಸ್ಪಿಗೆ ಬಿಟ್ಟುಕೊಟ್ಟಿರುವ ಒಟ್ಟು 20 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳು ಎಂಬುದು ವಿಶೇಷ. ಬಿಎಸ್ಪಿ ಅಭ್ಯರ್ಥಿಗಳು ಸ್ಪರ್ಧಿಸಲಿರುವ ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಬಿಎಸ್ಪಿ ಸ್ಪರ್ಧಿಸಲಿರು 20 ಕ್ಷೇತ್ರಗಳು : ಕೊಳ್ಳೇಗಾಲ, ಆನೇಕಲ್, ರಾಯಭಾಗ, ಚಿತ್ತಾಪುರ, ಕಲಬುರಗಿ ಗ್ರಾಮಾಂತರ, ಪೂರ್ವ ಹುಬ್ಬಳ್ಳಿ-ಧಾರವಾಢ,ಶಿರಹಟ್ಟಿ, ಸುಳ್ಯ.
ಜೆಡಿಎಸ್ ಸ್ಪರ್ಧಿಸಲಿರುವ ಕ್ಷೇತ್ರಗಳು : ಚಾಮರಾಜನಗರ, ಗುಂಡ್ಲುಪೇಟೆ , ಬೆಂಗಳೂರು ನಗರ, ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ-ಸದಲಗ, ದಾವಣಗೆರೆ ಹೊನ್ನಾಳಿ ಬೀದರ್ ಉತ್ತರ ಕಲಬುರಗಿ , ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬಾಗಲಕೋಟೆ ನಗರ, ಉಡುಪಿ, ಕಾರ್ಕಳ, ಹುಬ್ಬಳ್ಳಿ ಧಾರವಾಡ , ಹಾವೇರಿ, ಬ್ಯಾಡಗಿ, ಗದಗ ನಗರ, ವಿಜಯಪುರ, ಬಬಲೇಶ್ವರ, ದಕ್ಷಿಣ ಕನ್ನಡ.
Comments