ಕುತೂಹಲಕ್ಕಿಡಾಗಿರುವ ವರುಣಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ..!!



ತಿ.ನರಸೀಪುರ ಪಟ್ಟಣದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ವರುಣಾಕ್ಷೇತ್ರದ ಜೆಡಿಎಸ್ ಸಭೆ ಕರೆಯಲಾಗಿತ್ತು . ರಾಜ್ಯದಲ್ಲಿ ಚುನಾವಣೆ ಸಮಿಪಿಸುತ್ತಿದ್ದು, ಅದರಲ್ಲೂ ಪ್ರಮುಖ ಕುತೂಹಲ ಕ್ಷೇತ್ರವಾದ ಸಿಎಂ ಸಿದ್ದರಾಮಯ್ಯ ನವರ ತವರು ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲು ಪ್ಲಾನ್ ಆರಂಭಸಿದೆ.
ಎಲ್ಲಾ ಪಕ್ಷಗಳಿಗಿಂತ ಮುಂದಿರುವ ಜೆಡಿಎಸ್ ವರುಣಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿ ಸಂಚಲನ ಮೂಡಿಸಿದೆ. ನಿನ್ನೆ ಕರೆದ ಸಭೆಯಲ್ಲಿ ವರುಣಾಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್ ಪಕ್ಷದ ವರಿಷ್ಠರ ಸೂಚನೆಯಂತೆ ನಾನು ವೀರಶೈವ ಲಿಂಗಾಯತ ಸಮುದಾಯದ ಅಭಿಷೇಕ್ ಅವರನ್ನು ಜೆಡಿಎಸ್ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
Comments