ದಿನಾಂಕ 10-02-2018 ರಿಂದ ಬೆಳಿಗ್ಗೆ 8ರಿಂದ 12ಘಂಟೆಯವರೆಗೆ ಮತ್ತು ಸಂಜೆ 4ರಿಂದ 8ಘಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿರುತ್ತವೆ.





ಇಷ್ಟು ವರ್ಷದಿಂದ ಕುಲಗೆಟ್ಟು ಹೋಗಿದ್ದ ಈ (ಅ)ನ್ಯಾಯ ಬೆಲೆಯ ಅಂಗಡಿಗಳು ಮಾಡುತ್ತಿದ್ದ ಅನ್ಯಾಯ, ಅಕ್ರಮಗಳ ಬಗ್ಗೆ ಇದುವರೆಗೂ ಯಾವ ನಾಯಕರೂ ತಲೆ ಕೆಡಿಸಿಕೊಂಡಿರಲಿಲ್ಲ ವಿಜಯ ಕರ್ನಾಟಕ ಪತ್ರಿಕೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವರದಿಗಾರ ಶ್ರೀ ನಾಗರಾಜ್ ರವರು ಜನರ ಬವಣೆ ನೋಡಲು ಆಗದೆ ಇದರ ಬಗ್ಗೆ ಸಮಗ್ರವಾಗಿ ಸುದ್ಧಿ ಮಾಡಿದ ಪರಿಣಾಮವಾಗಿ, ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ, ಸಾರ್ವಜನಿಕರಿಗೆ ನ್ಯಾಯ ಸಿಕ್ಕಿದೆ. ಇದರ ಜೊತೆಗೆ ಭಾರತ್ ಗ್ಯಾಸ್ ಸಿಲಿಂಡರ್ ವಿತರಕರು ಸಾರ್ವಜನಿಕರಿಂದ ಅಕ್ರಮವಾಗಿ ಹೆಚ್ಚಿನ ದುಡ್ಡನ್ನ ವಸೂಲಿ ಮಾಡುವುದರ ಬಗ್ಗೆಯೂ ನಾಗರಾಜ್ ರವರೆ ಸುದ್ಧಿ ಮಾಡಿದರೂ ಹೆಚ್ಚುವರಿ ವಸೂಲಿ ನಿಂತಿಲ್ಲ, ನಾಯಕರಿಗೆ ಸಾರ್ವಜನಿಕರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಹೆಚ್ಚುವರಿ ವಸೂಲಿ ನಿಲ್ಲಿಸಲಿ ಯಾರೋ ಮಾಡಿದ ಸಾಧನೆಗೆ ಸಲೀಸಾಗಿ ಹೆಸರು ಹಾಕ್ಕೊಳ್ಳೊದಲ್ಲ ಎಂದು ವೀರೇಶ್ ದೊಡ್ಡಬಳ್ಳಾಪುರ ತಿಳಿಸಿದ್ದಾರೆ.
Comments