ಮಳವಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಜೆಡಿಎಸ್ ಅಭ್ಯರ್ಥಿ ಯಾರು ಗೊತ್ತಾ?
ಮಳವಳ್ಳಿಯ ಹಲಗೂರಿಗೆ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ಬಂದ ವೇಳೆ ಸೇರಿದ ಜನಸ್ತೋಮ ಕುಮಾರಸ್ವಾಮಿಗೆ ಹುಮ್ಮಸ್ಸನ್ನು ಹೆಚ್ಚಿಸುವಂತೆ ಮಾಡಿದೆ. ಅಷ್ಟೇ ಅಲ್ಲದೆ ಅವರ ಭರವಸೆಯ ಭಾಷಣಗಳು ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದೆ.
ರೈತರನ್ನುದ್ದೇಶಿಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಲ್ಲಿ ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಾ ಕೈಕಟ್ಟಿ ಕುಳಿತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದಾರೆ. ನಾನು ಅಧಿಕಾರಕ್ಕೆ ಬಂದ ತಕ್ಷಣವೇ ರಾಜ್ಯದಲ್ಲಿ ಮುಗ್ಧ ಜನರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ವಾಪಾಸ್ ತೆಗೆದುಕೊಳ್ಳುವುದಾಗಿ ಹೇಳಿದ ಅವರು, ಪ್ರತಿಯೊಬ್ಬ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ. ಮತ್ತೆ ಅವರು ಸಾಲ ಮಾಡದಂತೆ ಕೃಷಿ ಯೋಜನೆಯನ್ನು ಜಾರಿಗೆ ತಂದು ಅವರು ದುಡಿದ ಹಣಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.ಮಳವಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಡಾ. ಕೆ.ಅನ್ನಧಾನಿಯನ್ನು ಗೆಲ್ಲಿಸುವಂತೆಯೂ ಇದೇ ವೇಳೆ ಕರೆನೀಡಿದರು. ಬೆಂಗಳೂರಿನಲ್ಲಿ ಮಾರ್ಚ್ 7 ರಂದು ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ವೇಳೆ ಒಂದಷ್ಟು ಮಂದಿ ಜೆಡಿಎಸ್ ಸೇರ್ಪಡೆಯಾಗಿದ್ದು ಕಂಡು ಬಂತು. ಒಟ್ಟಾರೆ ಕುಮಾರಸ್ವಾಮಿ ಅವರ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ಮಂಡ್ಯದಲ್ಲಿ ಸಂಚಲನ ಮೂಡಿಸಿದ್ದಂತು ಸತ್ಯ.
Comments