ದೊಡ್ಡಬಳ್ಳಾಪುರ ನಗರ ಸಭೆಯ ನೂತನ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಸಂಘಟನಾಚತುರ ಹೆಚ್.ಎಸ್. ಶಿವಶಂಕರ್ ಆಯ್ಕೆ






ನಗರಸಭಾಧ್ಯಕ್ಷ ತ.ನ.ಪ್ರಭುದೇವ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕನಕದಾಸ ನಗರ [12ನೇ ವಾರ್ಡ್] ಸದಸ್ಯರಾಗಿರುವ ಶಿವಶಂಕರ್ ಜನಾನುರಾಗಿ ನಾಯಕ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಮತ್ತು ಊರಿನ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂತನ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಇವರಿಗೆ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರಾದ ಶ್ರೀ ಕೆ.ಎಂ. ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷರಾದ ಶ್ರೀ ತ.ನ. ಪ್ರಭುದೇವ್, ಮಾಜಿ ಅಧ್ಯಕ್ಷರಾದ ಶ್ರೀ ಕೆ.ಬಿ. ಮುದ್ದಪ್ಪ, ದೇವಾಂಗ ಮಂಡಲಿ ಅಧ್ಯಕ್ಷರಾದ ಶ್ರೀ ವಿ. ತಿಮ್ಮಶೆಟ್ಟಪ್ಪ, ವಾಣೀಜ್ಯೋದ್ಯಮಿಗಳಾದ ಶ್ರೀ ಹೆಚ್.ಪಿ. ಶಂಕರ್ ಮತ್ತಿತರ ಗಣ್ಯರು ಅಭಿನಂದಿಸಿದ್ದಾರೆ. ದೇವಾಂಗ ಮಂಡಲಿ ಕಾರ್ಯಕಾರಿ ಸಮಿತಿ ಸದಸ್ಯರು, ಗಾಳಿಪಟ ಕಲಾ ಸಂಘದ ಮತ್ತು ಮಿತ್ರ ಬಳಗದ ಸದಸ್ಯರು, ನೂರಾರು ಅಭಿಮಾನಿಗಳು ಹಾಜರಿದ್ದು ಅಭಿನಂದಿಸಿದರು, ಆದಷ್ಟು ಬೇಗ ನಗರಸಭೆಯ ಅಧ್ಯಕ್ಷರಾಗಿ ದೊಡ್ಡಬಳ್ಳಾಪುರ ನಗರಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಊರಿನ ದೇವಾಂಗ ಸಮಾಜದ ಹಿರಿಯರು ಅಭಿನಂದಿಸಿದ್ದಾರೆ.
Comments