ದೇವಾಂಗ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದೇವಾಂಗ ಮಹಾ ಸಮ್ಮೇಳನಕ್ಕೆ ಸಜ್ಜಾದ ದೊಡ್ಡಬಳ್ಳಾಪುರ



ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ಮಾರ್ಚ್ 4-3-2018 ಭಾನುವಾರ ಮತ್ತು 5-3-2018 ಸೋಮವಾರದಮ್ದು ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠ ಮಹಾ ಸಂಸ್ಥಾನಾಧೀಶರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ದೊಡ್ಡಬಳ್ಳಾಪುರದ ದೇವಾಂಗ ಸಮಾಜ ಬಂಧುಗಳಿಂದ ಮಹಾ ಸಮ್ಮೇಳನ ನಡೆಸಲು ತೆಲುಗು ದೇವಾಂಗ ಸಂಘದ ನೇತೃತ್ವದಲ್ಲಿ ಸಿದ್ದತೆಗಳು ನಡೆಯುತ್ತಿದೆ. ಸಮ್ಮೇಳನದಲ್ಲಿ ನೇಕಾರಿಕೆ ಉದ್ಯಮ, ಯುವಜನರ ಮತ್ತು ಮಹಿಳೆಯರ ಸಮಸ್ಯೆಗಳು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಜನಾಂಗದ ಪ್ರಾತಿನಿಧ್ಯ ಕುರಿತಂತೆ ಗೋಷ್ಠಿಗಳನ್ನು ನಡೆಸಲಾಗುವುದು.
ಮಹಾಸಮ್ಮೇಳನದ ಸ್ವಾಗತ ಸಮಿತಿಯುಲ್ಲಿ ಗೌರವಾಧ್ಯಕ್ಷರುಗಳಾಗಿ ದೇವಾಂಗ ಮಂಡಲಿಯ ಅಧ್ಯಕ್ಷರಾದ ಶ್ರೀ ವಿ. ತಿಮ್ಮಶೆಟ್ಟಪ್ಪ, ಆಂಧ್ರ ದೇವಾಂಗ ಸಂಕ್ಷೇಮ ಟ್ರಸ್ಟ್ ಅಧ್ಯಕ್ಷ ಶ್ರೀ ಎನ್. ರಮೇಶ್,ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಶರಾದ ಶ್ರೀ ಪಿ.ಸಿ.ಲಕ್ಷ್ಮೀನಾರಾಯಣ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಶ್ರೀ ಕೆ.ಗೋವಿಂದಪ್ಪ, ಕಾರ್ಯಧ್ಯಕ್ಷರಾಗಿ ಶ್ರೀ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಡಿ.ಸಿವಶಂಕರಪ್ಪ ಕಾರ್ಯ ನಿರ್ವಹಿಸಲಿದ್ದಾರೆ.
Comments