ಟಿಎಂಸಿ ಬ್ಯಾಂಕ್ ವತಿಯಿಂದ ಮಾರ್ಕೆಟ್ ಸ್ಕೂಲ್ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ





ಗಾಂಧಿನಗರದಲ್ಲಿರುವ ಹೆಸರಾಂತ ಟಿಎಂಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಾಸುದೇವ್ ರವರ ನಾಯಕತ್ವದಲ್ಲಿ ವಾಣಿಜ್ಯ ವ್ಯವಹಾರಗಳಲ್ಲದೆ ತನ್ನ ಚಟುವಟಿಕೆಗಳನ್ನು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ, ಇದರ ಅಂಗವಾಗಿ ನಗರದ ಮಾರ್ಕೆಟ್ ನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೇಶವ, ನಿರ್ದೇಶಕರಾದ ಪಿ.ಸಿ.ವೆಂಕಟೇಶ್, ಮಂಜುನಾಥ್, ಆವಲಕೊಂಡಪ್ಪ, ರಾಜಶೇಕರ್, ಕೃಷ್ಣಮೂರ್ತಿ, ಗೋಪಾಲ್, ಶ್ರೀಮತಿ ಗಿರಿಜ, ಸ್ಥಳೀಯ ಮುಖಂಡರು ಮತ್ತು ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
Comments