ಬಿಕ್ಕೇಗುಟ್ಟೆ ವೆಂಕಟೇಶ್ ಜೆಡಿಎಸ್ ಅಭ್ಯರ್ಥಿ?????
ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಭದ್ರಕೋಟೆ ಮೀಸಲು ಕ್ಷೇತ್ರವಾದಾಗಿನಿಂದ ಇಲ್ಲಿನ ಜೆಡಿಎಸ್ ಸ್ಥಳೀಯ ಅಕಾಂಕ್ಷಿಗಳ ಅಭ್ಯರ್ಥಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕ ಪಿ.ಆರ್ ಸುಧಾಕರ್ ಲಾಲ್ ಬಹುತೇಕ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೇ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಕೆಲಸಗಳನ್ನು ಮತ್ತು ಹೆಚ್ಚಿನ ಅನುಧಾನಗಳನ್ನು ನೀಡಿದ್ದಾರೆ ಎನ್ನುವ ಅಪಸ್ವರಗಳು ಕೇಳಿಬಂದು ಸ್ಥಳೀಯ ಮುಖಂಡರೇ ಜೆಡಿಎಸ್ ವರಿಷ್ಠರಿಗೆ ದೂರು ನೀಡಿರುವುದು ಅಚ್ಚಹಸಿರಾಗಿಯೇ ಇದೆ.
ಎಲ್ಲರನ್ನೂ ಲಾಲ್ ಒಮ್ಮತಕ್ಕೆ ತೆಗೆದುಕೊಳ್ಳುತ್ತಿಲ್ಲ ಬೇರೊಬ್ಬ ಪರಿಯಾಯ ಅಭ್ಯಥರ್ಿ ಕ್ಷೇತ್ರಕ್ಕೆ ಬೇಕು ಎನ್ನುವ ವರದಿಯನ್ನು ವರಿಷ್ಠರಿಗೆ ಮುಟ್ಟಿಸಿದ್ದಾರೆ ಈಗಾಲೇ ಕ್ಷೇತ್ರದಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಸಿ.ಎನ್ ದುರ್ಗ ಹೋಬಳಿಯ ಬಿಕ್ಕೇಗುಟ್ಟೆಯ ವಾಸಿಯಾದ ಪೀಣ್ಯಾ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಬಿಕ್ಕೇಗುಟ್ಟೆ ವೆಂಕಟೇಶ್ ಕ್ಷೇತ್ರದಲ್ಲಿ ಮುಖಂಡರನ್ನು ಭೇಟಿ ಮಾಡುತ್ತಾ ಟಿಕೆಟ್ ರೇಸ್ ನಲ್ಲಿದ್ದಾರೆ.
ಸ್ಥಳೀಯ ಮುಖಂಡರು ಉತ್ತಮವಾಗಿ ಸ್ಪಂಧಿಸುತ್ತಾ ಎಲ್ಲರೊಟ್ಟಿಗೆ ಇರುತ್ತಿರುವ ಈ ಅಭ್ಯಥರ್ಿಯೇ ಸೂಕ್ತವೆಂದು ವರಿಷ್ಠರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಲಾಲ್ ಕೈ ಹಿಡಿದು ಅಭ್ಯಥರ್ಿ ಎಂದು ಘೋಷಸಿದ್ದಾರೆ ಆದರೆ ಬಿಕ್ಕೇಗುಟ್ಟೇ ವೆಂಕಟೇಶ್ ಪಕ್ಷ ಸಂಘಟನೆಯನ್ನೂ ಗಮನಿಸುತ್ತಿರುವ ವರಿಷ್ಠರು ಯಾರು ಸೂಕ್ತ ಅಭ್ಯರ್ಥಿ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನುವಂತ ಮಾತುಗಳು ಹರಿದಾಡುತ್ತಿದ್ದು ಒಟ್ಟಾರೆ ನನಗೆ ಎದುರಾರು ಇಲ್ಲ ಎನ್ನುತ್ತಿದ್ದ ಹಾಲಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ತಳಮಳಗೊಂಡಿದ್ದು ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುವಂತಹ ಸ್ಥಿತಿಯಿದೆ.
ಒಟ್ಟಾರೆ ಕ್ಷೇತ್ರದಲ್ಲಿ ಕೊನೆಯ ಹಂತದ ವರೆಗೂ ಯಾರು ಅಭ್ಯರ್ಥಿಯಾಗುತ್ತಾರೆ ಕಾದುನೋಡಬೇಕಿದ್ದು ಒಮ್ಮತದ ಅಭ್ಯರ್ಥಿಗೆಯಾದವಿರಗೆ ಎಲ್ಲರೂ ಜೈ ಎನ್ನಬೇಕಿದೆ.
Comments