ಸಮಾಜ ಶಕ್ತಿ ಟ್ರಸ್ಟ್ [ರಿ.] ಇವರಿಂದ ಜಿಲ್ಲಾಮಟ್ಟದ ಯೋಗ, ಚಿತ್ರಕಲೆ, ರಂಗೋಲಿ, ಸೂಪರ್ ಮಿನಿಟ್ ಮತ್ತು ನೃತ್ಯ ಸಾಂಸ್ಕೃತಿಕ ಸ್ಪರ್ಧೆಗಳು
4-2-18ನೇ ಭಾನುವಾರ ಬೆಳಿಗ್ಗೆ 9 ಘಂಟೆಗೆ ಸಮಾಜ ಶಕ್ತಿ ಟ್ರಸ್ಟ್ ಇವರ ವಾರ್ಷಿಕೋತ್ಸವದ ಅಂಗವಾಗಿ ಮಹಿಳಾ ಸಮಾಜ, ಹಳೇ ಬಸ್ ನಿಲ್ದಾಣ, ದೊಡ್ಡಬಳ್ಳಾಪುರ, ಇಲ್ಲಿ ಬೆಂ. ನಗರ ಹಾಗೂ ಗ್ರಾಮೀಣ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ, ಸ್ಪರ್ಧೆಗಳು ಯೋಗ, ಚಿತ್ರಕಲೆ, ರಂಗೋಲಿ, ಸೂಪರ್ ಮಿನಿಟ್ ಮತ್ತು ನೃತ್ಯ ವಿಭಾಗದಲ್ಲಿ ನಡೆಯುತ್ತದೆ. ಪ್ರತಿ ವಿಭಾಗಕ್ಕೂ 1/2/3 ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ೫ರಿಂದ ೧೨ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಭಾಗವಹಿಸಬಹುದು. ಭಾಗವಹಿಸುವ ಸ್ಪರ್ಧಿಗಳು 9ಘಂಟೆಯ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನೃತ್ಯ ವಿಭಾಗಕ್ಕೆ ರೂ.301/- ಯೋಗ, ಚಿತ್ರಕಲೆ, ರಂಗೋಲಿ ಸ್ಪರ್ಧೆಗೆ ರೂ.25/- ಮತ್ತು ಸೂಪರ್ ಮಿನಿಟ್ ಸ್ಪರ್ಧೆಗೆ ರೂ. 3೦/- ಪ್ರವೇಶ ಶುಲ್ಕವಿರುತ್ತದೆ. ತೀರ್ಪುಗಾರರ ತೀರ್ಮಾನವೆ ಅಂತಿಮ. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಮತ್ತು ಕರೆತರುವ ಶಿಕ್ಷಕರಿಗೆ ಮದ್ಯಾನ್ಹ ಊಟದ ವ್ಯವಸ್ಥೆ ಇರುತ್ತದೆ.
Comments