ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ
ಮಹಿಳಾ ಸಮಾಜದಲ್ಲಿ ಗಣರಾಜ್ಯೋತ್ಸವದಂದು ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 31-1-18ರ ಭುದವಾರ ನಡೆದ ಸಿರಿಧಾನ್ಯಗಳಿಂದ ಆರೋಗ್ಯ, ಕಾರ್ಯಕ್ರಮದಲ್ಲಿ ಡಾ|| ಶ್ರೀಮತಿ ಸುನಿತ ರವರು ಬಹುಮಾನ ವಿತರಿಸಿದರು, ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಎಸ್.ಪ್ರಭಾರವರು ವಹಿಸಿದ್ದರು. ಸದಸ್ಯರು ಮತ್ತು ಸದಸ್ಯೇತರರಿಗೆ ನಡೆದ ಸ್ಪರ್ಧೆಯಲ್ಲಿ ಒಟ್ಟು ೪೫ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಮತಿ ಎಲ್.ಸಿ. ದೇವಕಿ, ಉಪಾಧ್ಯಕ್ಷರಾದ ಶ್ರೀಮತಿ ಕೆ.ಜೆ.ಕವಿತ. ಖಜಾಂಚಿ ಶ್ರೀಮತಿ ಯಶೋಧ, ನಿರ್ದೇಶಕರುಗಳಾದ ಶ್ರೀಮತಿ ವತ್ಸಲ, ಶ್ರೀಮತಿ ನಿರ್ಮಲ, ಶ್ರೀಮತಿ ಗೌರಮ್ಮ, ಶ್ರೀಮತಿ ವರಲಕ್ಷ್ಮಿ, ಶ್ರೀಮತಿ ಗಿರಿಜ ಮತ್ತು ಸದಸ್ಯರು ಭಾಗವಹಿಸಿದ್ದರು.
ಸದಸ್ಯರ ವಿಭಾಗದಲ್ಲಿ ಬಹುಮಾನ ಪಡೆದವರು:
ಕೆ.ಎಲ್.ಸರೋಜಮ್ಮ [ಪ್ರಥಮ] ಎನ್. ಉಮಾ [ದ್ವಿತೀಯ] ಎನ್.ರಾಧ [ತೃತೀಯ] ಸಮಾಧಾನಕರ ಬಹುಮಾನ ಪಡೆದವರು, ಕೆ.ಹೆಚ್.ಉಮಾದೇವಿ, ಬಿ.ಎಲ್.ಅನಿತಾ, ಎಂ. ಸೌಭಾಗ್ಯಮ್ಮ
ಸದಸ್ಯೇತರ ವಿಭಾಗದಲ್ಲಿ ಬಹುಮಾನ ಪಡೆದವರು:
ಎಸ್. ಧನುಶ್ರೀ [ಪ್ರಥಮ] ಎನ್.ಸುಮಾ [ದ್ವಿತೀಯ] ಕೃಷ್ಣವೇಣಿ [ತೃತೀಯ] ಸಮಾಧಾನಕರ ಬಹುಮಾನ ಪಡೆದವರು ಎಲ್.ಅಶ್ವಿನಿ, ಎಸ್.ಭಾಗ್ಯ, ಎ.ಆರ್.ಪದ್ಮದಯಾ, ಕೆ.ಎ. ದೀಪಿಕ.
Comments