ಮೋದಿಯವರಿಂದ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಸೊನ್ನೆ : ಎಚ್ ಡಿಕೆ

ಕೇಂದ್ರ ಬಜೆಟ್ ಕುರಿತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಇಂದಿನ ಬಜೆಟ್‌ನಲ್ಲಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಸೊನ್ನೆ ಕೊಟ್ಟಿದ್ದಾರೆ. ಮೋದಿ ಕೊಟ್ಟ ಆ ಸೊನ್ನೆಗೆ ಜನರು ಮರಳಾಗುತ್ತಿದ್ದಾರೆ. ಮೋದಿಯವರ ಈ ಬಜೆಟ್ ಮಾಧ್ಯಮಗಳಿಗಾದರೂ ತೃಪ್ತಿ ತಂದಿದೆಯಾ ಎಂದು ಪ್ರಶ್ನಿಸಿದ ಅವರು, ಮಾಧ್ಯಮಗಳೇ ಜನರಿಗೆ ಸತ್ಯ ಹೇಳಬೇಕು ಎಂದರು.
ನಿನ್ನೆಯಿಂದಲೂ ಟಿವಿ ನೋಡುತ್ತಿದ್ದೇನೆ. ಎಲ್ಲಾ ಮಾಧ್ಯಮಗಳು ಚುನಾವಣೆ ಹಿನ್ನೆಲೆ ಕರ್ನಾಟಕಕ್ಕೆ ಭಾರೀ ಉಡುಗೊರೆ ಕಾದಿದೆ ಎಂದು ತೋರಿಸಿತ್ತಿದ್ದವು. ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಬಗ್ಗೆ ಇಡೀ ದಿನ ಮಾಧ್ಯಮಗಳು ಹೊಗಳಿದ್ದವು. ಅದೆಲ್ಲ ಇಂದು ಏನಾಯ್ತು ಎಂದು ಜನರು ಯೋಚಿಸಬೇಕಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
Comments