ನನ್ನ ರಾಜಕೀಯಕ್ಕೆ ಜನ್ಮ ನೀಡಿದ ರಾಮನಗರದ ಜನತೆ ಒಪ್ಪುವದಾದರೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧ..!!

01 Feb 2018 4:52 PM |
715 Report

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು, ನನ್ನ ರಾಜಕೀಯಕ್ಕೆ ಜನ್ಮ ನೀಡಿದ ರಾಮನಗರದ ಜನತೆಯ ಅನುಮತಿ ಕೇಳಿಕೊಂಡು ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ನಿಲ್ಲುವ ಕುರಿತು ನಿರ್ಧರಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಸುಮಾರು 50 ಶಾಸಕರನ್ನು ಗೆಲ್ಲಿಸಬೇಕೆಂಬ ಮಹದಾಸೆಯಿಂದ ಇಲ್ಲಿಂದಲೇ ಸ್ಪರ್ಧಿಸಬೇಕೆಂಬ ಬಯಕೆಯಿದೆ. ಆದರೆ, ರಾಮನಗರ ಮತ್ತು ನನ್ನದು ತಾಯಿ-ಮಗನ ಸಂಬಂಧ.

ರಾಮನಗರದ ಜನತೆ ಒಪ್ಪುವದಾದರೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಸಿದ್ಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ,ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ ಮತ್ತು ದೇವರಹಿಪ್ಪರಗಿಯಲ್ಲಿ ಸ್ಪರ್ದಿಸಬೇಕೇಂದರೆಎರಡೂ ಕಡೆ ನಿಲ್ಲಬೇಕೆಂದರೆ ಅವರನ್ನು ಕೇಳಿಯೇ ನಿರ್ಧರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವರಹಿಪ್ಪರಗಿಯಿಂದ ನಮ್ಮ ಪಕ್ಷದ ಯಾರೇ ಶಾಸಕರಾದರೂ ಕುಮಾರಸ್ವಾಮಿಯವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದಂತೆ. ಇಲ್ಲಿನ ಅಭಿವೃದ್ಧಿಗೆ ರಾಮನಗರದ ರೀತಿಯಲ್ಲೇ ನಿಗಾವಹಿಸುತ್ತೇನೆ ಎಂದು ಭರವಸೆ ನೀಡಿದರು. ರಾಮನಗರ ಜನತೆಯನ್ನು ಕೇಳಿಯೇ ನಿರ್ಧರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವರಹಿಪ್ಪರಗಿಯಿಂದ ನಮ್ಮ ಪಕ್ಷದ ಯಾರೇ ಶಾಸಕರಾದರೂ ಕುಮಾರಸ್ವಾಮಿಯವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದಂತೆ.

Edited By

hdk fans

Reported By

hdk fans

Comments