ದೊಡ್ಡಬಳ್ಳಾಪುರಕ್ಕೆ ಸಬ್ ಅರ್ಬನ್ ರೈಲ್..ಮೂರು ವರ್ಷದಲ್ಲಿ ಕಾರ್ಯಾಚರಣೆ
ಸಬ್ ಅರ್ಬನ್ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ರೈಲ್ವೆ ಇಲಾಖೆಯ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ. ಸುಮಾರು 58 ರೈಲುಗಳು,116 ಸೇವೆಗಳನ್ನು ಯೋಜನೆ ಒಳಗೊಂಡಿದ್ದು, ಸುಮಾರು 440 ಕಿ.ಮೀ ದೂರ ಕ್ರಮಿಸಲಿದೆ.ಬೆಂಗಳೂರು-ಮಂಡ್ಯ, ಬೆಂಗಳೂರು-ಯಶವಂತಪುರ, ಯಶವಂತಪುರ-ತುಮಕೂರು, ಯಶವಂತಪುರ-ಯಲಹಂಕ, ಯಲಹಂಕ-ಬೈಯ್ಯಪ್ಪನಹಳ್ಳಿ, ಯಶವಂತಪುರ-ಬೈಯ್ಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ, ಬೈಯಪ್ಪನಹಳ್ಳಿ-ಹೊಸೂರು ಸೋಲದೇವನಹಳ್ಳಿ-ಯಲಹಂಕ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ. ಸುಮಾರು 10,949 ಕೋಟಿ ರು ವೆಚ್ಚದ ಯೋಜನೆಯ 1,745 ಕೋಟಿ ರೂ ಅಂದಾಜು ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ-ಹಂತ 1 ಜಾರಿಗೆ ಬರಲಿದೆ.
Comments