ಕೊರಟಗೆರೆ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುತ್ತೇನೆ: ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್
ಕೊರಟಗೆರೆ ಜ.29:- ಎಲ್ಲರೂ ಮನೆಗಳನ್ನು ನಿಮರ್ಿಸಿಕೊಳ್ಳಬೇಕು ಎನ್ನುವ ಕಲ್ಪನೆಯಡಿಯಲ್ಲಿ ಕೊರಟಗೆರೆ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು. ತಾಲ್ಲೂಕಿನ ಕೋಳಾಲ ಹೋಬಳಿಯ ವಿವಿಧ ಗ್ರಾ.ಪಂ ಗಳಲ್ಲಿ ಆಶ್ರಯ ಯೋಜನೆ ಮನೆಗಳ ಫಲಾನುಭವಿಗಳ ಆಯ್ಕೆಯ ಗ್ರಾಮಸಭೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ ವ್ಯಾಪ್ತಿಗೆ 24 ಇಲಾಖೆಗಳು ಬರಲಿದ್ದು, ಪಂಚಾಯತ್ರಾಜ್ ಕಾಯ್ದೆ ಪ್ರಕಾರ ಆಶ್ರಮ ಮನೆಗಳನ್ನು ಹಂಚುವ ಸಂಪೂರ್ಣ ಅಧಿಕಾರ ಗ್ರಾಮಪಂಚಾಯಿತಿಗೆ ಇರುತ್ತದೆ ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚೆಗೆ ಗ್ರಾ.ಪಂಗಳಿಗೆ ಸಕರ್ಾರ ವಿಶೇಷ ಅಧಿಕಾರವನ್ನು ನೀಡಿದ್ದು, ಗ್ರಾ.ಪಂಗಳು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕಿದೆ.
ತಾವು ವಸತಿ ಸಚಿವ ಕೃಷ್ಣಪ್ಪರಿಗೆ ಕೊರಟಗೆರೆ ಕ್ಷೇತ್ರಕ್ಕೆ 10 ಸಾವಿರ ಆಶ್ರಯ ಯೋಜನೆಯ ಮನೆಗಳ ಮಂಜೂರಾತಿಗೆ ಮನವಿ ನೀಡಿದ್ದು, ಅವರು 4000 ಮನೆಗಳನ್ನು ಸದ್ಯಕ್ಕೆ ಮಂಜೂರು ಮಾಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾ.ಪಂ ಗಳಲ್ಲಿ ಮನೆಗಳ ಅವಶ್ಯಕತೆಗಳನ್ನು ತಿಳಿದು ಇನ್ನೂ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿಸುವ ಕ್ರಮ ಕೈಗೊಳ್ಳಲಾಗುವುದು. ಈ ಮನೆಗಳನ್ನು ಜಾತಿ, ಪಕ್ಷ, ಸ್ವಹಿತ ಮರೆತು ಅಗತ್ಯತೆಯ ಬಡವನಿಗೆ ಮನೆಗಳನ್ನು ಪಾರದರ್ಶಕವಾಗಿ ನೀಡಬೇಕು ಹಾಗೂ ವಿಧವೆ, ಅಂಗವಿಕಲ ಸೇರಿದಂತೆ ವಿಶೇಷ ಪ್ರಾತಿನಿದ್ಯಗಳನ್ನು ನೀಡಿ ಮನೆ ಹಂಚಿದರೆ ಸಕರ್ಾರದ ಯೋಜನೆಗಳು ಪರಿಪೂರ್ಣವಾಗುತ್ತವೆ ಎಂದ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಚುನಾವಣಾ ಪೂರ್ವದಲ್ಲಿ ನೀಡಿದ ಪ್ರನಾಳಿಕೆಯಂತೆ 15 ಲಕ್ಷ ಆಶ್ರಯ ಮನೆಗಳನ್ನು ನಿಮರ್ಿಸಿದ್ದು ಸೂರಿಲ್ಲದ ಬಡವರಿಗೆ ನಮ್ಮ ಸಕರ್ಾರವು ಆಸರೆಯನ್ನು ಕಲ್ಪಿಸಿದೆ ಎಂದರು.
ಶಾಸಕ ಸುಧಾಕರ್ಲಾಲ್ ಮಾತನಾಡಿ ಗ್ರಾಮ ಸಭೆಗಳು ಉತ್ತಮವಾಗಿ ನಡೆಯುತ್ತಿದ್ದು, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಗ್ರಾ.ಪಂಗಳಲ್ಲಿ ಸಣ್ಣ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಬೇಕಿದೆ. ಈ ಬಾರಿ ಅತೀ ಹೆಚ್ಚು ಮನೆಗಳು ಗ್ರಾ.ಪಂಗಳಿಗೆ ಮಂಜೂರಾಗಿದ್ದು, ಅವುಗಳನ್ನು ಬಡವರಿಗೆ ಪಕ್ಷತೀತಾವಾಗಿ ಹಂಚುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಅದನ್ನು ಕಾರ್ಯರೂಪಕ್ಕೆ ತರಬೇಕಿದೆ. ಶಕ್ತಿಇಲ್ಲದ ಬಡವರಿಗೆ ಮನೆಗಳನ್ನು ನೀಡಿ ಅವರಿಗೆ ಕಟ್ಟಿಕೊಳ್ಳುವ ಎಲ್ಲಾ ಸೌಲಭ್ಯಗಳನ್ನು ಗ್ರಾ.ಪಂ ಮಾಡಬೇಕು ಎಂದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಬೆಮೆಲ್ಕಾಂತರಾಜು, ಜಿ.ಪಂ ಸದಸ್ಯ ಶಿವರಾಮಯ್ಯ, ತಾ.ಪಂ ಕೆಂಪರಾಮಯ್ಯ, ಮಾಜಿ ಜಿ.ಪಂ ಹಾಗೂ ಕೆ.ಪಿ.ಸಿ.ಸಿ ಸದಸ್ಯ ಪಿ.ಎನ್ ಕೃಷ್ಣಮೂತರ್ಿ, ಇ.ಓ ಎಲ್.ಮೋಹನ್ಕುಮಾರ್ ಸೇರಿದಂತೆ ಇತರರು ಇದ್ದರು.
Comments