ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಶ್ರೀ ವಿಷ್ಣು ಸಹಸ್ರ ನಾಮ ಮತ್ತು ಹನುಮಾನ್ ಚಾಲೀಸಾ ಪಾರಾಯಣ





ಬನ್ನಿಮಂಗಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭೀಷ್ಮ ಏಕಾದಶಿ ಪ್ರಯುಕ್ತ ಶ್ರೀ ವಿಷ್ಣು ಸಹಸ್ರ ನಾಮ ಮತ್ತು ಹನುಮಾನ್ ಚಾಲೀಸಾ ಪಾರಾಯಣವನ್ನು ಶ್ರೀ ಚೌಡೇಶ್ವರಿ ಮಹಿಳಾ ಸಂಘ, ಸರ್ಕಲ್ ಮಾರಮ್ಮ ದಾಸಸಾಹಿತ್ಯ ಮಹಿಳಾ ಮಂಡಳಿ, ಶ್ರೀ ಅಭಯ ಚೌಡೇಶ್ವರಿ ಭಜನಾ ಮಂಡಳಿ, ಸಹಜಾನಂದ ಭಕ್ತ ಮಂಡಳಿ, ದೊಡ್ಡಬಳ್ಳಾಪುರ ಮತ್ತು ವಿಷ್ಣು ಸಹಸ್ರ ನಾಮ ಪಾರಾಯಣ ಮಂಡಳಿ, ಯಲಹಂಕ ಇವರಿಂದ ಶ್ರೀ ಶ್ರೀ ಶ್ರೀ ದಿವ್ಯ ಜ್ಞಾನಾನಂದಸ್ವಾಮೀಜಿಯವರ ಸಾನಿಧ್ಯದಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಪಿಳ್ಳಮುನಿಶಾಮಪ್ಪ, ಶಾಸಕರು, ದೇವನಹಳ್ಳಿ, ಶ್ರೀ ಟಿ.ಎನ್. ಪ್ರಭುದೇವ್, ನಗರಸಭಾ ಅಧ್ಯಕ್ಷರು, ಶ್ರೀ ವಿ. ತಿಮ್ಮಶೆಟ್ಟಪ್ಪ, ಅಧ್ಯಕ್ಷರು, ದೇವಾಂಗ ಮಂಡಲಿ, ಭಾಗವಹಿಸಿದ್ದರು.
Comments