ಮೇಕೆದಾಟು ಯೋಜನೆಗೆ ರನ್ ಅಪ್ ರೀವರ್ ಸ್ಕಿಂಗೆ ಇಂಧನ ಇಲಾಖೆ ಸಿದ್ಧ : ಡಿಕೆ ಶಿವಕುಮಾರ್

27 Jan 2018 3:44 PM |
2436 Report

'ಮೇಕೆದಾಟು ಯೋಜನೆ, ಶಿವನ ಸಮುದ್ರ ಹಾಗೂ ರನ್ ಅಪ್ ರೀವರ್ ಸ್ಕಿಂಗೆ ಇಂಧನ ಇಲಾಖೆ ಎಲ್ಲ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು. ಯೋಜನೆಯಲ್ಲಿ ಇನ್ನೂ ಕೆಲವು ತಾಂತ್ರಿಕ ತೊಂದರೆಗಳಿವೆ. ತಮಿಳುನಾಡು ಯೋಜನೆಯ ಎನ್‌ಒಸಿ ಕೇಳಿತ್ತು. ಅದನ್ನು ನೀಡಿದ್ದೇವೆ. ಅವರು ಒಪ್ಪುತಾರೂ ಬಿಡುತ್ತಾರೂ ನಾವಂತೂ ಯೋಜನೆ ಕೈಗೆತ್ತಿಕೊಳ್ಳಲು ರೂಪುರೇಷೆಗಳನ್ನು ಸಿದ್ದಮಾಡಿಟ್ಟುಕೊಳ್ಳುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಇಂಧನ ಸಚಿವ ತಿಳಿಸಿದರು.

'ಬಂಗಾರಪೇಟೆಯಲ್ಲಿ ಮುಂದಿನ ಸಿಎಂ ನಾನೇ ಎಂದು ಹೇಳಿಲ್ಲ. ಅರ್ಜೆಂಟ್ನಲ್ಲಿರುವವರು ಅವರವರ ರೇಸ್ ಮುಗಿಸಲಿ ಎಂದು ಹೇಳಿದೆ ಅಷ್ಟೇ. ಶುಭಗಳಿಗೆ ಬಂದಾಗ ಆತುರಪಡಬೇಕಿಲ್ಲ. ನಾನು ಕಾಯಲು ತಯಾರಾಗಿದ್ದೇನೆ. ಮೊದಲು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗುತ್ತೇನೆ,' ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿಕುಮಾರ್ ಸ್ಪಷ್ಟಪಡಿಸಿದರು. ಕೋಮುಗಲಭೆಗಳಲ್ಲಿ ಭಾಗಿಯಾಗಿ ಪ್ರಕರಣ ದಾಖಲಾಗಿದ್ದವರ ಕೇಸ್ಗಳನ್ನ ರಾಜ್ಯ ಸರ್ಕಾರ ಹಿಂಪಡೆಯಲು ಚಿಂತಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಶಿವಕುಮಾರ್, 'ಯಾರು ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರೋ, ಅಂತವರ ಪ್ರಕರಣಗಳನ್ನ ಮಾತ್ರ ಹಿಂಪಡೆಯಲು ಚಿಂತಿಸಿದ್ದೇವೆ. ಇದರಲ್ಲಿ ಹಿಂದೂ ಅಥವಾ ಮುಸ್ಲಿಂರದ್ದು ಎಂಬ ಭೇದಭಾವ ಮಾಡುವುದಿಲ್ಲ,' ಎಂದು ತಿಳಿಸಿದರು.

Edited By

dks fans

Reported By

dks fans

Comments