ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಿಸಲು ಹೊರಟ ಗಾಳಿಪಟ ಕಲಾಸಂಘದ ಸದಸ್ಯರು.





ನಗರದ ಜನಪ್ರಿಯ ಗಾಳಿಪಟ ಕಲಾಸಂಘ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿದ್ದು ಇದೀಗ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವನಿಟ್ಟಿನಲ್ಲಿ ಹೊರಟಿದೆ. ದುಬೈನಲ್ಲಿ ನಡೆಯುವ ಅಂತರ ರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲು ತನ್ನ ತಂಡದ ಸದಸ್ಯರಾದ ಶ್ರೀನಾಥ್ ಮತ್ತು ಸುಹಾಸ್ ರವರನ್ನು ದುಬೈಗೆ ಕಳುಹಿಸಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಕೀರ್ತಿ ತರಲಿ ಎಂದು ಸಂಘದ ಎಲ್ಲ ಸದಸ್ಯರು ಅವರಿಗೆ ಶುಭ ಹಾರೈಸಿ ಕಳುಹಿಸಿದ್ದಾರೆ.
Comments