ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಪುರುಷ ಮತ್ತು ಮಹಿಳೆಯರ ಫ್ರೀ ಸ್ಟೈಲ್ ಜಿಲ್ಲಾ ಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿ
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಭಯ ಆಂಜನೇಯ ಕ್ರೀಡಾ ಮಂಡಳಿ ವತಿಯಿಂದ ಪುರುಷ ಮತ್ತು ಮಹಿಳೆಯರ ಫ್ರೀ ಸ್ಟೈಲ್ ಜಿಲ್ಲಾ ಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿ ಜನವರಿ 31 ರಂದು ನಡೆಯಲಿದೆ. ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ವಯೋಮಾನದ ಮಿತಿ ಇಲ್ಲ. ಬೇರೆ ತಾಲ್ಲೂಕಿನಿಂದ ಬರುವ ಕುಸ್ತಿಪಟುಗಳಿಗೆ ಪ್ರಯಾಣ ಭತ್ಯೆ, ಮದ್ಯಾನ್ಹ ಊಟದ ವ್ಯವಸ್ಥೆ ಇರುತ್ತದೆ. ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ಕುಸ್ತಿಪಟುಗಳು ಭಾಗವಹಿಸಲು ಕೋರಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಜೀವ್ ನಾಯಕ್ 9343558705 ಡಿ ಪಿ ಅಂಜನೇಯ 9242993593 ಹೆಚ್ ಪ್ರಕಾಶ್ ರಾವ್ 9880119143 ಡಿ ವೆಂಕಟೇಶ್ 9060490608
Comments