KORATAGERE BUND

ಕೊರಟಗೆರೆ (ಜ. 25):- ತಾಲೂಕಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಕನ್ನಡ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು, ಹೋಟೆಲ್, ಮೆಡಿಕಲ್ಸ್, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳು ಬಹುತೇಕ ಮಳಿಗೆಗಳು ಎಂದಿನಂತೆ ಕಾರ್ಯನಿರವಹಿಸಿದವು.
ಕೊರಟಗೆರೆ ಜ. 25:- ತಾಲೂಕಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಕನ್ನಡ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು, ಹೋಟೆಲ್, ಮೆಡಿಕಲ್ಸ್, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳು ಬಹುತೇಕ ಮಳಿಗೆಗಳು ಎಂದಿನಂತೆ ಕಾರ್ಯನಿರವಹಿಸಿದವು.
ಬೆಳಿಗ್ಗೆ ಸರ್ಕಾರಿ ಬಸ್ ಸಂಖ್ಯೆ ವಿರಳವಾಗಿತ್ತು ಆದರೆ ಬಹುತೇಕ ಖಾಸಗೀ ಬಸ್ ಗಳ ಸಂಚಾರ ಮತ್ತು ಆಟೋಗಳು ಎಂದಿನಂತೆ ರೋಡಿಗಿಳಿದಿದ್ದವು.
ಪ್ರತಿಭಟನೆಯಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ,ನಾರಾಯಣ ಗೌಡ ಶಿವರಾಮೇಗೌಡ) ಬಣವಲ್ಲದೇ, ಜಯಕರ್ನಾಟಕ, ನಮ್ಮ ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.(ಚಿತ್ರ ಇದೆ)
Comments