ಆತ್ಮವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ: ಕಣ್ವ ಗ್ರೂಪ್ ಮಾಲೀಕ ನಂಜುಂಡಯ್ಯ
ಕೊರಟಗೆರೆ : ಜ.:- ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಆತ್ಮವಿಶ್ವಾಸಕ್ಕಿಂತ ಶಕ್ತಿ ಮತ್ತೊಂದಿಲ್ಲ ಎಂದು ಕಣ್ವಗ್ರೂಪ್ ಆಫ್ ಇಂಡಸ್ಟ್ರೀಸ್ ನ ಮಾಲೀಕರಾದ ನಂಜುಂಡಯ್ಯ ತಿಳಿಸಿದರು. ಪಟ್ಟಣದ ಪ್ರಿಯದರ್ಶಿನಿ ಪಿ.ಯು ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆತ್ಮವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ: ಕಣ್ವ ಗ್ರೂಪ್ ಮಾಲೀಕ ನಂಜುಂಡಯ್ಯ
ಕೊರಟಗೆರೆ : ಜ.:- ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಆತ್ಮವಿಶ್ವಾಸಕ್ಕಿಂತ ಶಕ್ತಿ ಮತ್ತೊಂದಿಲ್ಲ ಎಂದು ಕಣ್ವಗ್ರೂಪ್ ಆಫ್ ಇಂಡಸ್ಟ್ರೀಸ್ ನ ಮಾಲೀಕರಾದ ನಂಜುಂಡಯ್ಯ ತಿಳಿಸಿದರು.
ಪಟ್ಟಣದ ಪ್ರಿಯದರ್ಶಿನಿ ಪಿ.ಯು ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಜ್ಞಾನವಿದ್ದರೆ ಸಾಧನೆಯನ್ನು ಮಾಡಲು ಸಾಧ್ಯವಾಗುವುದಿಲ್ಲ ಜ್ಞಾನದೊಟ್ಟಿಗೆ ಆತ್ಮವಿಶ್ವಾಸವನ್ನು ರೂಡಿಸಿಕೊಳ್ಳಬೇಕು, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬುವಂತಹ ಕೆಲಸವನ್ನು ಮಾಡಬೇಕು ಕೇವಲ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನಿಟ್ಟುಕೊಂಡು ಫಲಿತಾಂಶ ಪಡೆಯುವುದು ಸಾಧನೆಲ್ಲ ಸಾಮಾನ್ಯರಿಂದ ಅಸಮಾನ್ಯ ಸಾಧನೆಯನ್ನು ಮಾಡಿಸಬೇಕು ಎಂದು ಕರೆ ನೀಡಿದರು.
ತುಮಕೂರಿನ ಮಾರುತಿ ಪಿಯು ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಗ್ರಹಿಕೆ ಎನ್ನುವುದು ಅತ್ಯಮೂಲ್ಯವಾದನ್ನು ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ರೂಡಿಸಿಕೊಳ್ಳಬೇಕು ಇದರೊಟ್ಟಿಗೆ ಸಮಯ ಪಾಲನೆಗೆ ಮಹತ್ವ ನೀಡಬೇಕು, ಕೇವಲ ಕ್ರೀಡೆಗಳಲ್ಲಿ ಗೆಲ್ಲುವುದು ಗೆಲುವಲ್ಲ ಜೀವನವೆಂಬ ಕ್ರೀಡೆಯಲ್ಲಿ ಗೆದ್ದರೆ ಅದು ಅಪ್ರತಿಮ ಗೆಲವು ಎಂದರು.
ಪಟ್ಟಣದ ಕಾಳಿದಾಸ ಪ್ರೌಢಶಾಲೆಯ ನಿವೃತ್ತ ವಿಜ್ಞಾನ ಶಿಕ್ಷಕ ಹನುಮಂತರೆಡ್ಡಿ ಮಾತನಾಡಿ ಭಾರತ ಮಾನವ ಶಕ್ತಿಯ ಉತ್ಪಾಧಿಸುತ್ತಿರುವ ವಿಶ್ವದ ಭಲಿಷ್ಠ ದೇಶ ಆದ್ದರಿಂದಲೇ ಇಡೀ ವಿಶ್ವ ಭಾರತಕ್ಕೆ ಹೆದರುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಆಸ್ತಿಯಾಗಬೇಕು ಎಂದು ಸಲಹೆಯಿತ್ತರು.
ಸಂಸ್ಥೆಯ ಅಧ್ಯಕ್ಷ ಪಿ.ಎಸ್ ಮಿನ್ನಾಸ್, ಪ್ರಾಂಶುಪಾಲ ಚಂದ್ರಶೇಖರ್, ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಸಿ ಪಾಂಡುರಂಗ ಇದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸ್ಮಿತಾ, ಉಪನ್ಯಾಸಕರಾದ ಪ್ರದೀಪ್, ಸಂತೋಷ್, ಸೇರಿದಂತೆ ಇತರರು ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Comments