ಡಾ ಜಿ ಪರಮೇಶ್ವರ್ ಗ್ರಾಮವಾಸ್ತವ್ಯ
ಕೊರಟಗೆರೆ (ಜ.24):- ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲು ಗ್ರಾಮ ವಾಸ್ಥವ್ಯ ಸಹಕಾರಿಯಾಗಿದೆ ಆದ್ದರಿಂದ ನಾನು ಗ್ರಾಮ ವಾಸ್ಥವ್ಯ ಮಾಡುತ್ತಿದ್ದು ವಿರೋಧಿಗಳು ಏನೇ ಅರ್ಥಕೊಟ್ಟರೂ ನಾನು ಅದಕ್ಕೆ ಕಿವಿಗೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದರು. ಕೊರಟಗೆರೆ ತಾಲ್ಲೂಕಿನ ಚೆನ್ನರಾಯನದುರ್ಗ ಹೋಬಳಿಯ ದೊಗ್ಗನಹಳ್ಳಿ ಗ್ರಾಮದ ನರಸರಾಜು ಎಂಬುವವರಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ನಂತರ ಮಾತನಾಡಿದರು. ಎತ್ತಿನ ಹೊಳೆ ಯೋಜನೆಯಿಂದ ಗ್ರಾಮ ಮುಳುಗಡೆಯಾಗುತ್ತಿದೆ ಇನ್ನು ಮುಂದೆ ನಮ್ಮ ಮನೆಗಳು ಇರುವುದಿಲ್ಲ ಬರೀ ನೆನಪು ಮಾತ್ರ ಎಂದು ಕೆಲವು ಗ್ರಾಮಸ್ಥರು ಭಾಹುಕರಾಗಿ ನನ್ನೊಟ್ಟಿಗೆ ಮಾತನಾಡಿದ್ದಾರೆ ಅವರಲ್ಲಿದ್ದ ತಪ್ಪು ಕಲ್ಪನೆಯನ್ನು ಸರಿ ಪಡಿಸಿದ್ದೇನೆ ಮಾಹಿತಿ ತಪ್ಪಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದರು ಇದನ್ನು ನಿವಾರಿಸಿದ್ದೇನೆ ನಾನು ನಿಮೊಟ್ಟಿಗೆ ಇರುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದರು.
ಕೊರಟಗೆರೆ ತಾಲೂಕಿನ ದೊಗ್ಗನಹಳ್ಳಿ ಗ್ರಾಮದಲ್ಲಿ ಪರಂ: ಗ್ರಾಮವಾಸ್ತವ್ಯ
ಮೊದಲ ಎಡಗೈ ದಲಿತರ ಮನೆ ಮಾಡಿದ್ದ ಪರಂ ಎರಡನೇ ಗ್ರಾಮವಾಸ್ತವ್ಯಕ್ಕೆ ಒಕ್ಕಲಿಗರ ಮನೆ ಆಯ್ಕೆ
ನಾನೂ ನಿಮ್ಮ ಸೇವಕ.... ನಾನು ಜನರಿಂದ ದೂರ ಇರರುವನಲ್ಲ.... ಜನರೊಟ್ಟಿಗೆ ಇರುವವನು
ಕೊರಟಗೆರೆ (ಜ.24):- ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲು ಗ್ರಾಮ ವಾಸ್ಥವ್ಯ ಸಹಕಾರಿಯಾಗಿದೆ ಆದ್ದರಿಂದ ನಾನು ಗ್ರಾಮ ವಾಸ್ಥವ್ಯ ಮಾಡುತ್ತಿದ್ದು ವಿರೋಧಿಗಳು ಏನೇ ಅರ್ಥಕೊಟ್ಟರೂ ನಾನು ಅದಕ್ಕೆ ಕಿವಿಗೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದರು.
ಕೊರಟಗೆರೆ ತಾಲ್ಲೂಕಿನ ಚೆನ್ನರಾಯನದುರ್ಗ ಹೋಬಳಿಯ ದೊಗ್ಗನಹಳ್ಳಿ ಗ್ರಾಮದ ನರಸರಾಜು ಎಂಬುವವರಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ನಂತರ ಮಾತನಾಡಿದರು.
ಎತ್ತಿನ ಹೊಳೆ ಯೋಜನೆಯಿಂದ ಗ್ರಾಮ ಮುಳುಗಡೆಯಾಗುತ್ತಿದೆ ಇನ್ನು ಮುಂದೆ ನಮ್ಮ ಮನೆಗಳು ಇರುವುದಿಲ್ಲ ಬರೀ ನೆನಪು ಮಾತ್ರ ಎಂದು ಕೆಲವು ಗ್ರಾಮಸ್ಥರು ಭಾಹುಕರಾಗಿ ನನ್ನೊಟ್ಟಿಗೆ ಮಾತನಾಡಿದ್ದಾರೆ ಅವರಲ್ಲಿದ್ದ ತಪ್ಪು ಕಲ್ಪನೆಯನ್ನು ಸರಿ ಪಡಿಸಿದ್ದೇನೆ ಮಾಹಿತಿ ತಪ್ಪಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದರು ಇದನ್ನು ನಿವಾರಿಸಿದ್ದೇನೆ ನಾನು ನಿಮೊಟ್ಟಿಗೆ ಇರುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದರು.
ಎರಡನೇ ಗ್ರಾಮವಾಸ್ತವ್ಯ:-
ಜ. 5 ರಂದು ಕಸಬಾ ಹೋಬಳಿಯ ಮುಗ್ಗೊಂಡನಹಳ್ಳಿಯಲ್ಲಿನ ದಲಿತ ಮುಖಂಡ ಹನುಮಂತರಾಯಪ್ಪನವರ ಮನೆಯಲ್ಲಿ ಗ್ರಾಮ ವಾಸ್ತಯ್ಯ ಮಾಡಿದ್ದರು ಅಂದು ಕ್ಷೇತರದಲ್ಲೀನ ಪ್ರತೀ ಹೋಬಳಿಗಳಲ್ಲಿಯೂ ವಾಸ್ತವ್ಯ ಮಾಡುವುದಾಗಿ ತಿಳಿಸಿದ್ದರು ಅದರಂತೆ ಚೆನ್ನರಾಯನದುರ್ಗ ಹೋಬಳಿಯನ್ನು ಆಯ್ಕೆ ಮಾಡಿಕೊಂಡು ಗ್ರಾಮವಾಸ್ತವ್ಯವನ್ನು ಮಾಡಿ ಕ್ಷೇತ್ರ ಪ್ರವಾಸದಲ್ಲಿ ಚುರುಕಿನಿಂದ ಓಡಾಡುತ್ತಿದ್ದಾರೆ.
ಸಮುದಾಯದವರನ್ನು ಓಲೈಸುವ ತಂತ್ರ:-
ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾತ್ತಿರುವ ಸದಾಶಿವ ಆಯೋಗಕ್ಕೆ ಪರಂ ವಿರೋಧ ಎನ್ನುವವರ ಬಾಯಿ ಮುಚ್ಚಿಸಲು ಎಡಗೈ ದಲಿತರ ಮನೆಯನ್ನೇ ಆಯ್ಕೆ ಮಾಡಿಕೊಂಡು ಮೊದಲ ವಾಸ್ತವ್ಯ ಮಾಡುವ ಮೂಲಕ ವಿರೋಧಿಗಳಿಗೆ ಸದೇಶ ರವಾನಿಸಿದ್ದ ಪರಂ ಈ ಬಾರಿ ಒಕ್ಕಲಿಗ ಸಮುದಾಯದವರ ಮನೆಯನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರದಲ್ಲಿರುವಂತಹ 45 ಸಾವಿರಕ್ಕೂ ಹೆಚ್ಚಿನ ಮತದಾರರನ್ನು ಓಲೈಕೆ ಮಾಡುವ ಯೋಜನೆಯನ್ನು ಪರಂ ಮಾಡಿದ್ದಾರೆ.
ಭವ್ಯಸ್ವಾಗತ:-
ಗ್ರಾಮದ ಮಹಿಳೆಯರು ಹಾರತಿ ಎತ್ತಿ ಪೂರ್ಣ ಕುಂಭ,ಕಳಶಗಳೊಂದಿಗೆ ಸ್ವಾಗತಿಸುತ್ತಿಸಿ ಗ್ರಾಮದಲ್ಲಿ ಸಂಭ್ರಮದಿಂದ ಗ್ರಾಮಸ್ಥರು ಜಮಾಯಿಸಿಯಿಸಿ ಗ್ರಾಮದಲ್ಲೇನೋ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಪರಂ ಗ್ರಾಮಸ್ಥರ ಸ್ವಾಗತಕ್ಕೆ ಹರ್ಷವ್ಯಕ್ತಪಡಿಸಿದರು.
ಮತ್ತೆ ದಿಡೀರ್ ನಿರ್ಧಾರ :-
ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡುತ್ತೇನೆ ಎಂದು ಹೇಳಿದ್ದರೂ ಸಹ ಯಾವ ಹೋಬಳಿಯಲ್ಲಿ ಎಂದು ಮಾಡುತ್ತೇನೆ ಎನ್ನುವುದನ್ನು ಗುಟ್ಟಾಗಿಡಲಾಗಿತ್ತು ಮೊದಲ ಗ್ರಾಮ ವಾಸ್ತವ್ಯದ ರೀತಿಯಲ್ಲಿಯೇ ಎರಡನೇ ಗ್ರಾಮವಾಸ್ತವ್ಯವೂ ಸಹ ಕಾರ್ಯಕರ್ತರಿಗೂ ಶಾಕ್ ನೀಡಿದೆ.
ಪ್ರತೀ ನಾಯಕನಿಗೂ ತಪ್ಪಿದ್ದಲ್ಲ:-
ರಾಜಕೀಯದಲ್ಲಿ ಆರೋಪಗಳು ಎಲ್ಲಾ ನಾಯಕರ ವಿರುದ್ದವೂ ಬರುತ್ತವೆ ನನ್ನ ಬಗ್ಗೆಗೂ ಬಡವರ ಮನೆ ಹೋಗುವುದಿಲ್ಲ, ಜನರೊಟ್ಟಿಗೆ ಬೆರೆಯುವುದಿಲ್ಲ ಎನ್ನುವ ಆರೋಪಗಳನ್ನು ಮಾಡುತ್ತಾರೆ ಇದಕ್ಕ ನಾನು ಹೊರತಾಗಿದ್ದೇನೆ ಅವರ ಕಲ್ಪನೆ ತಪ್ಪು ನನಗೂ ಗ್ರಾಮೀಣ ಬದುಕಿನ ಅರಿವಿದೆ.
ನರಸರಾಜು ಕುಟುಂಬ ಹಿನ್ನೆಲೆ:-
ಕಳೆದ 15 ವರ್ಷದಿಂದ ಕಾಂಗ್ರೇಸ್ ಪಕ್ಷದ ಕಾರ್ಯರ್ತನಾಗಿರುವ ನರಸರಾಜು ಮನೆಯನ್ನು ಪರಂ ಆಯ್ಕೆ ಮಾಡಿಕೊಂಡಿದ್ದಾರೆ ನರಸರಾಜು ತಂದೆಯೂ ಸಹ ಕಾಂಗ್ರೇಸ್ ಕಾರ್ಯಕರ್ತರಾಗಿದ್ದರು ನರಸರಾಜು ಮನೆಯನ್ನೇ ಪರಂ ಆಯ್ಕೆ ಮಾಡಿಕೊಂಡು ತಮ್ಮ ಇಚ್ಚೇ ಯಂತೆಯೇ ರಾಗಿ ಮುದ್ದೆ, ಸೊಪ್ಪಿನ ಸಾರು, ಸೊಪ್ಪಿನ ಪಲ್ಯ, ಹೆಸರು ಬೇಳೆ ಅಡುಗೆ ಮಾಡಿಸಿಕೊಂಡು ಕುಟುಂಬದ ಸದಸ್ಯರೊಂದಿಗೆ ಊಟ ಮಾಡಿ ನಂತರ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮದ ಕುರಿತಾಗಿ ಸಮಸ್ಯೆಗಳು ,ಮಳೆ ಬೆಳೆಯ ಬಗ್ಗೆ ಕೆಲ ಹೊತ್ತು ಮಾತನಾಡಿ, ಗ್ರಾಮಸ್ಥರೊಂದಿಗೆ ಕಳೆದು ನಂತರ ನರಸರಾಜು ಅವರ ಮನೆಯ ಕೋಣೆಯಲ್ಲಿ ಹಾಸಿದ್ದ್ದ ಚಾಪೆಯ ಮೇಲೆಯೇ ನಿದ್ದೆ ಗೆ ಜಾರಿದರು.
ವಾಸ್ತವ್ಯದ ಹೈಲೈಟ್ಸ್ :-
ರಾತ್ರಿ 10.30
Comments