ಸಾಮನ್ಯ ಜನರಿಗೆ ಬೇಡವಾದ ಬಂದ್, ಪತ್ರ ಚಳುವಳಿ, ಪ್ರತಿಭಟನೆ ಸಾಕಿತ್ತು
ಮಹದಾಯಿ ವಿವಾದ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ ಮತ್ತು ಪ್ರಧಾನ ಮಂತ್ರಿಗಳಿಗೆ ಅಂಚೆ ಪತ್ರಗಳ ಮೂಲಕ ಹಕ್ಕೊತ್ತಾಯ ಚಳುವಳಿಯನ್ನು ನಗರದ ಕನ್ನಡ ಸಂಘಟನೆಗಳ ಒಕ್ಕೂಟ, ಪ್ರಗತಿಪರ, ರೈತ, ಮಹಿಳಾ, ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸೇರಿ ಆಯೋಜಿಸಿದ್ದರು. ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನಡ ಪಕ್ಷ, ಕನ್ನಡ ಸಾಹಿತ್ಯ ಪರಿಷತ್ತು, ಡಾ.ರಾಜ್ ಅಭಿಮಾನಿಗಳ ಸಂಘ, ಜಯ ಕರ್ನಾಟಕ ಮತ್ತು ಬೆರಳೆಣಿಕೆಯಷ್ಟು ರೈತರು ಇದ್ದರು. ನೆಲದ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಗೋವಾ ಸಿಎಂ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಪ್ರತಿಭಟಿನೆ ನಡೆಸುವುದರೊಂದಿಗೆ ತಾಲೂಕು ಕಛೇರಿಯಲ್ಲಿ ಸಮಾಪ್ತಗೊಂಡಿತು. ಮುಖಂಡರಾದ ತ.ನ.ಪ್ರಭುದೇವ್, ಆಂಜಿನಪ್ಪ, ಸಂಜೀವನಾಯ್ಕ, ಸತ್ಯನಾರಾಯಣ್, ಸತ್ಯಪ್ರಕಾಶ್, ಹರೀಶ್, ಕಸಾಪ ಅಧ್ಯಕ್ಷೆ ಪ್ರಮೀಳಾ ಮಹದೇವ್ ಭಾಗವಹಿಸಿದ್ದರು. ವಿವಾದ ಬಗೆಹರಿಸಲು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ಪ್ರಧಾನ ಮಂತ್ರಿಗಳಿಗೆ ತಾಲೂಕಿನಿಂದ ಒಂದುಲಕ್ಷ ಪತ್ರ ಬರೆಯಲು ಮನವಿ ಮಾಡಲಾಯಿತು.
Comments