ಕೊಂಗಾಡಿಯಪ್ಪ ಪಿ.ಯೂ ಕಾಲೇಜಿನ ಕುಮಾರಿ. ಎನ್. ರೂಪಿಣಿ ಪ್ರಬಂಧ ಸ್ಪರ್ದೆ ವಿಜೇತೆ






ವ್ಯಕ್ತಿ ವಿಕಸನ ರಿ. ಜಿಲ್ಲಾ ಆಡಳಿತ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂ. ಗ್ರಾಮಾಂತರ ಇವರಿಂದ ದಿನಾಂಕ ೨೪-೧-೧೮ರ ಬುಧವಾರ ಬೆಳಿಗ್ಗೆ ೧೧ ಘಂಟೆಗೆ ಟೆಂಪಲ್ ಆಫ್ ನಾಲೆಡ್ಜ್, ೧ನೇ ಕ್ರಾಸ್, ಕೋರ್ಟ್ ರಸ್ತೆ, ರೋಜಿಪುರ ಇಲ್ಲಿ ಸಾಮಾನ್ಯ ವ್ಯಕ್ತಿತ್ವ ಕುರಿತು ಕಾರ್ಯಾಗಾರ ಹಾಗೂ ದೇಶದ ಐಖ್ಯತೆ ಮೂಡಿಸಲು ಬೇಕಾದ ವ್ಯಕ್ತಿತ್ವ? ಬಗ್ಗೆ ಪ್ರಬಂಧ ಸ್ಪರ್ಧೆಯು ಯಶಸ್ವಿಯಾಗಿ ನಡೆಯಿತು. ನೂರಕ್ಕೂ ಹೆಚ್ಚು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು, ಪ್ರಬಂಧ ಸ್ಪರ್ಧೆಯಲ್ಲಿ ಕೊಂಗಾಡಿಯಪ್ಪ ಪಿ.ಯೂ ಕಾಲೇಜಿನ ಕುಮಾರಿ. ಎನ್. ರೂಪಿಣಿ, ಪ್ರಥಮ ಪಿ.ಯೂ.ಸಿ. ವಿಜೇತರಾದರೆ, ಲಾವಣ್ಯ ಶಾಲೆಯ ಮಕ್ಕಳು ಥೀಮ್ ಮೆಸೇಜ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸಂಸ್ಥೆಯ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಜರಿದ್ದರು.
Comments