೬೯ನೇ ಗಣರಾಜ್ಯೋತ್ಸವದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
ನೇಕಾರರ ಹೋರಾಟ ಸಮಿತಿ, ನವೋದಯ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಆಶ್ರಯದಲ್ಲಿ ದಿ. ೨೬-೧-೨೦೧೮ ಶುಕ್ರವಾರ ಬೆಳಿಗ್ಗೆ ೧೦-೩೦ಕ್ಕೆ ಸಿನಿಮಾ ರಸ್ತೆಯಲ್ಲಿರುವ ಶ್ರೀನಿವಾಸ ಮಾರ್ಕೆಟ್, ಸಿಟಿ ಯೂನಿಯನ್ ಬ್ಯಾಂಕ್ ಎದುರು, ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ, ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರು ಶ್ರೀ ಟಿ.ವೆಂಕಟರಮಣಯ್ಯ ನೆರವೇರಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಶ್ರೀ ತ.ನ.ಪ್ರಭುದೇವ್, ಅಧ್ಯಕ್ಷರು. ನಗರಸಭೆ, ದೊಡ್ಡಬಳ್ಳಾಪುರ. ಆಗಮಿಸಲಿದ್ದಾರೆ, ಅಧ್ಯಕ್ಷತೆಯನ್ನು ಶ್ರೀ ಬಿ.ಜಿ. ಹೇಮಂತರಾಜು ಅಧ್ಯಕ್ಷರು, ನೇಕರರ ಹೋರಾಟ ಸಮಿತಿ ಮತ್ತು ನವೋದಯ ಸೊಸೈಟಿ, ವಹಿಸಲಿದ್ದಾರೆ. ಮಾನ್ಯ ನೇಕಾರ ಬಂಧುಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಸಹಕರಿಸಲು ಕೋರಿರುತ್ತಾರೆ.
Comments