ದೇವಾಂಗ ಮಂಡಲಿ ಕಾರ್ಯಕಾರಿ ಸಮಿತಿ ವತಿಯಿಂದ ನೂತನ ನಗರಸಭಾಧ್ಯಕ್ಷರಿಗೆ ಅಭಿನಂದನೆ




ನಗರದ ದೇವಾಂಗ ಮಂಡಲಿ ಕಾರ್ಯಾಲಯದಲ್ಲಿ ಇಂದು ಅಧ್ಯಕ್ಷರಾದ ತಿಮ್ಮಶೆಟ್ಟಪ್ಪನವರು ನೂತನ ನಗರಸಭಾ ಅಧ್ಯಕ್ಷರಾದ ತ.ನ. ಪ್ರಭುದೇವ್ ರವರನ್ನು ಸನ್ಮಾನಿಸಿದರು. ಸನ್ಮಾನಕ್ಕೆ ವಂದನೆಗಳನ್ನು ತಿಳಿಸಿದ ಪ್ರಭುದೇವ್ ಮಂಡಲಿಯ ಎಲ್ಲ ಕಾರ್ಯಗಳಿಗೆ ನಗರಸಭೆಯಿಂದ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಜಿ.ಶ್ರೀನಿವಾಸ್, ನಗರಸಭಾ ಉಪಾಧ್ಯಕ್ಷೆ ಜಯಲಕ್ಷ್ಮಿ, ನಗರಸಭಾ ಸದಸ್ಯರಾದ ಹೆಚ್.ಎಸ್. ಶಿವಶಂಕರ್, ಡಿ.ಎಂ.ಚಂದ್ರಶೇಖರ್, ಯಶೋದಮ್ಮ, ಬಾಬು, ಮಂಡಲಿ ಕಾರ್ಯದರ್ಶಿ ಕೇಶವ, ಉಪಾಧ್ಯಕ್ಷರಾದ ಚಿಕ್ಕಣ್ಣ, ದಿನೇಶ, ಸದಸ್ಯರಾದ ಅಖಿಲೇಶ್, ವರಲಕ್ಷ್ಮಿ, ಶೀಲ, ಶ್ರೀದೇವಿ, ಸಹ ಕಾರ್ಯದರ್ಶಿ ನಟರಾಜ್, ಮತ್ತಿತರರು ಹಾಜರಿದ್ದರು.
Comments