ಜೆಡಿಎಸ್ ಬಂಡಾಯ ಶಾಸಕ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡ್ರು
ಬೆಂಗಳೂರಿನ ಮಲ್ಲೇಶ್ವರದ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡರು, ಒಬ್ಬ ಮಹಾನುಭಾವನನ್ನು ಎಂಎಲ್ಎ ಮಾಡುವುದಕ್ಕಾಗಿ ದರಿದ್ರ ನಾರಾಯಣ ಸಮಾವೇಶ ಮಾಡಿದ್ದೆ ಎಂದು ಪರೋಕ್ಷವಾಗಿ ಬಂಡಾಯ ಶಾಸಕ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಅಭಿವೃದ್ಧಿಗೆ ಯಾರು ಮುಹೂರ್ತಹಾಕಿದ್ದು ಎಂಬುದು ಜನರಿಗೆ ತಿಳಿದಿದೆ. ಈಗಿನವರು ನಾವು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳುತ್ತಾರೆ ಆದರೆ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರಿವುದೇ ದೊಡ್ಡ ಸಾಧನೆ ಎಂದರು. ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಲು ಹೋರಾಟ ಮಾಡಿದ್ದೆ ಎಂದರು. ಈ ರಾಜ್ಯದಲ್ಲಿ ಎಲ್ಲಿದೆ ಕಾನೂನು? ಹಾಡಹಗಲೇ ಕೊಲೆ, ದರೋಡೆ ಹಾಗೂ ಸುಲಿಗೆಗಳು ನಡೆಯುತ್ತಿವೆ. ಅಧಿಕಾರಿಗಳು ಕೆಂಪಯ್ಯನ ಉಪಟಳದಿಂದ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಜನರು, ಅಧಿಕಾರಿಗಳು ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದರು.
Comments