ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಎಚ್ ಡಿಕೆ
ಅಭಿವೃದ್ಧಿ ಮಾಡಲ ರಾಜಕಾರಣಿಗಳು ನಾಲಾಯಕ್ ಎಂದು ಟೀಕಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು ರಾಜ್ಯಕ್ಕೆ ಸಚಿವ ಹೆಗಡೆ ಕೊಡುಗೆ ಏನು, ಇದುವರೆಗೆ ರಾಜ್ಯದಲ್ಲಿ ಒಂದೇ ಒಂದು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆದಿಲ್ಲ ಇವೆಲ್ಲವನ್ನು ಗಮನಿಸಿದರೆ ನಾಲಾಯಕ್ ಯಾರೆಂಬುದು ನೀವೇ ಅರ್ಥಮಾಡಿಕೊಳ್ಳಿ ಎಂದರು.
ಸರ್ಕಾರದ ನಿಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸಾಧನಾ ಸಮಾವೇಶಗಳನ್ನು ಮಾಡುತ್ತಿದ್ದಾರೆ ಒಂದು ಕಡೆ ಬಿಜೆಪಿಯುಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸದೆ ಪರಿವರ್ತನಾ ಸಮಾವೇಶ ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಹಿಂದುತ್ವ ಮತ್ತು ಜಾತ್ಯಾತೀತ ಮೇಲೆ ಚುನಾವಣೆಗೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅಮಿತ್ ಶಾ ಅವರು ಬೆಂಗಳೂರಿಗೆ ರಾಜಕೀಯ ವ್ಯಾಪಾರಿಕರಣಕ್ಕೆ ಬರುತ್ತಿದ್ದಾರೆ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಇದುವರೆಗೆ ತುಟಿ ಬಿಚ್ಚಿಲ್ಲ ಎಲ್ಲಾ ರಾಜಕೀಯ ಪಕ್ಷಗಳು ಸಮಸ್ಯೆಗಳು ಮರೆತು ಚುನಾವಣೆ ಮೂಡಿನಲ್ಲಿವೆ ಎಂದು ಕಿಡಿಕಾರಿದರು.
Comments