ಗಣರಾಜ್ಯೋತ್ಸವದಂದು ಮಹಿಳಾ ಸಮಾಜದಲ್ಲಿ ರಂಗೋಲಿ ಸ್ಪರ್ಧೆ






ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರ ಕೇಂದ್ರ ಇವರು ಜನವರಿ ೨೬ರಂದು ಗಣರಾಜ್ಯೋತ್ಸವದ ಪ್ರಯುಕ್ತ ಮಹಿಳೆಯರಿಗೆ ಬೆಳಿಗ್ಗೆ ೧೦-೩೦ ರಿಂದ ಮದ್ಯಾನ್ಹ ೧ ಘಂಟೆಯವರೆಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ, ಸ್ಪರ್ಧೆಗೆ ಬೇಕಾಗುವ ಸಾಮಾಗ್ರಿಗಳನ್ನು ಮಹಿಳೆಯರೇ ತರತಕ್ಕದ್ದು. ೩೧-೧-೧೮ರ ಬುಧವಾರ ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳಿಂದ ಆರೋಗ್ಯ ಕುರಿತು ಮಾಹಿತಿ ನೀಡಲಿದ್ದಾರೆ ಡಾ|| ಸವಿತಾ, ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ವಿಜ್ಞಾನಿ, ಹಾಡೋನಹಳ್ಳಿ, ಅಧ್ಯಕ್ಷತೆಯನ್ನು ಶ್ರೀಮತಿ. ಕೆ.ಎಸ್. ಪ್ರಭ, ಅಧ್ಯಕ್ಷರು, ಮಹಿಳಾ ಸಮಾಜ, ಇವರು ವಹಿಸಲಿದ್ದಾರೆ. ನಂತರ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುವುದು.
Comments