ಭಾನುವಾರ ಶ್ರೀ ಅಭಯ ಚೌಡೇಶ್ವರಿದೇವಿಯ ರಥೋತ್ಸವ



ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜ್ ರಸ್ತೆಯಲ್ಲಿರುವ ಶ್ರೀ ಅಭಯ ಚೌಡೇಶ್ವರಿದೇವಿಯ ೮ನೇ ವರ್ಷದ ರಥೋತ್ಸವ ೨೧ರ ಭಾನುವಾರದಂದು ನಡೆಯಲಿದೆ. ಬೆಳಿಗ್ಗೆ ೬ ಘಂಟೆಗೆ ಅಮ್ಮನವರಿಗೆ ಪಂಚಾಂಮೃತಾಭಿಶೇಕ, ವಿಶೇಷ ಅಲಂಕಾರದೊಂದಿಗೆ ೧೧-೩೦ಕ್ಕೆ ಮಹಾಮಂಗಳಾರತಿ, ಮದ್ಯಾನ್ಹ ೧೨ ಘಂಟೆಗೆ ಅಮ್ಮನವರ ರಥೋತ್ಸವ ಪ್ರಾರಂಭವಾಗಲಿದೆ. ದೊಡ್ಡಬಳ್ಳಾಪುರದ ತೊಗಟವೀರ ಕ್ಷತ್ರಿಯ ಸಂಘ ಮತ್ತು ದೇವಾಂಗ ಮಂಡಲಿಯ ಸಹಕಾರದೊಂದಿಗೆ ರಥೋತ್ಸವ ನಡೆಯಲಿದೆ.
Comments