ತನ್ನ ಗುರು ಇಹಲೋಕ ತ್ಯಜಿಸಿದ್ದನ್ನು ನೆನೆದು ಕಣ್ಣೀರಿಟ್ಟ ಉಪೇಂದ್ರ
ಕಾಶಿನಾಥ್ ಅವರು ನನ್ನ ಪಾಲಿನ ದೇವರು, ಅವರ ಮನೆ ನನ್ನ ಪಾಲಿಗೆ ದೇವಸ್ಥಾನ' ಎಂದು ನಟ,ಕೆಪಿಜೆಪಿ ಸ್ಥಾಪಕ ಉಪೇಂದ್ರ ಕಣ್ಣೀರಿಟ್ಟಿದ್ದಾರೆ. ಕಾಶಿನಾಥ್ ಅವರ ಪಾರ್ಥಿವ ಶರೀರ ಜಯನಗರದ ಮನೆಗೆ ತಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ ತೀವ್ರ ಭಾವುಕರಾಗಿ ಕಣ್ಣೀರು ಸುರಿಸಿದರು.
ಇದು ಶಾಕಿಂಗ್ ಅಂತಾ ಹೇಳಬಹುದು. ಇಷ್ಟು ಬೇಗ ನಮ್ಮಲ್ಲೆರನ್ನು ಬಿಟ್ಟು ಹೋಗುತ್ತಾರೆ ಅಂತಾ ಅಂದುಕೊಂಡಿರಲಿಲ್ಲ. ನನಗೆ ಅವರಿಗೆ ಉಷಾರಿಲ್ಲ ಅಂತಾ ಗೊತ್ತಿರಲಿಲ್ಲ. ಅವರು ಯಾರ ಬಳಿನೂ ಏನನ್ನು ಹೇಳಿಕೊಳ್ಳಲ್ಲ. ಬೆಳಿಗ್ಗೆ ಸುದ್ದಿ ಬಂದಾಗ ಶಾಕ್ ಆಯಿತು. ನನ್ನ ಪಾಲಿಗೆ ಮಾತ್ರ ಅವರು ದೇವರು. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ನನ್ನ ದೇವರು ಅವರು. ಅವರ ಕುಟುಂಬದವರಿಗೆ, ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಇದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. 'ನಾನು ಚಿತ್ರರಂಗದ ಎಬಿಸಿಡಿ ಕಲಿತದ್ದು ಕಾಶಿನಾಥ್ ಅವರಲ್ಲಿ. ಅವರು ನನ್ನ ಪಾಲಿಗೆ ದೇವರು. ಅವರ ಮನೆಯಲ್ಲಿ ನನಗೆ ಊಟ ಹಾಕಿದ್ದಾರೆ. ಅವರೊಬ್ಬ ಮಹಾನ್ ವ್ಯಕ್ತಿ.ಅವರ ನಿಧನದಿಂದ ನನಗೆ ತುಂಬಾ ಆಘಾತವಾಗಿದೆ. ಅವರ ಅನಾರೋಗ್ಯದ ವಿಚಾರ ನನಗೆ ಗೊತ್ತಿರಲಿಲ್ಲ. ಅವರು ಯಾವ ನೋವನ್ನೂ ಹೇಳಿಕೊಳ್ಳುತ್ತಿರಲಿಲ್ಲ'ಎಂದರು. ತನ್ನ ಗುರು ಇಹಲೋಕ ತ್ಯಜಿಸಿದ ವಿಚಾರ ತಿಳಿದ ಕೂಡಲೇ ಶ್ರೀಶಂಕರ ಅಸ್ಪತ್ರೆಗೆ ಧಾವಿಸಿ ಬಂದಿದ್ದ ಉಪೇಂದ್ರ ಅಂತಿಮ ದರ್ಶನ ಪಡೆದಿದ್ದರು.
Comments