ವಸತಿ ಶಾಲೆಗಳ ೨೦೧೮-೧೯ನೇ ಸಾಲಿನ ೬ನೇ ತರಗತಿ ದಾಖಲಾತಿಗಾಗಿ ಹಾಲಿ ಐದನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ






ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, [ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ] ಇವರಿಂದ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಅಟಲ್ ಬಿಹಾರಿ ವಾಜಪೇಯಿ / ಇಂದಿರಾ ಗಾಂಧಿ / ಅಂಬೇಡ್ಕರ್ ವಸತಿ ಶಾಲೆಗಳ ೨೦೧೮-೧೯ನೇ ಸಾಲಿನ ೬ನೇ ತರಗತಿ ಪ್ರವೇಶ ದಾಖಲಾತಿಗಾಗಿ ಹಾಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ದೊರೆಯುವ ಸ್ಥಳ: ಉಪನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಎಲ್ಲಾ ತಾಲ್ಲೂಕು ಸಹಾಯಕ ನಿರ್ದೇಶಕರ ತಾಲ್ಲೂಕು ಕಛೇರಿ, ವಿಸ್ತರಣಾಧಿಕಾರಿಗಳ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಅಧಿಕೃತ ವೆಬ್ ಸೈಟ್ www.kreis.kar.nic.in ನಿಂದಲೂ ಪಡೆಯಬಹುದು
ಭರ್ತಿ ಮಾಡಿದ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ
ಸಲ್ಲಿಸಲು ಕಡೆಯ ದಿನಾಂಕ ೨೫-೧-೧೮
ಪ್ರವೇಶ ಪರೀಕ್ಷೆ ದಿ. ೧೮-೨-೨೦೧೮ರಂದು ಬೆಳಿಗ್ಗೆ ೧೧ರಿಂದ ೧ರವರೆಗೆ
ಹೆಚ್ಚಿನ ಮಾಹಿತಿಗೆ: ನಟರಾಜ್ ಪ್ರಾಂಶುಪಾಲರು, ೯೭೩೯೪೬೪೯೪೫
Comments