ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿಗೆ ಬಿಡುಗಡೆಯಾಗಿದ್ದ ಹಣದಿಂದ ಕಾಮಗಾರಿ ನಡೆಯುತ್ತಿದೆ ಮಾಜಿ ಶಾಸಕ ನರಸಿಂಹಸ್ವಾಮಿ
ದೊಡ್ಡಬಳ್ಳಾಪುರದಲ್ಲಿ ಯಡಿಯೂರಪ್ಪ ಪರಿವರ್ತನಾ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ ಯಡಿಯೂರಪ್ಪನವರು ಮಾತನಾಡುತ್ತಾ ಶ್ರೀ ಜೆ. ನರಸಿಂಹಮೂರ್ತಿ ಸೋಲಿಸಿ ತಪ್ಪು ಮಾಡಿದ್ದೀರಿ, ಅದನ್ನು ಈ ಬಾರಿ ಸರಿಪಡಿಸಿ ಜೆ.ಎನ್.ಎಸ್. ಅವರನ್ನು ಗೆಲ್ಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ, ಕಳೆದ ಬಾರಿ ಮಾಡಿದ ತಪ್ಪು ಇನ್ನೆಂದೂ ಮಾಡಲ್ಲ, ತುಘಲಕ್ ಸರ್ಕಾರದಿಂದ ಶೀಘ್ರ ಮುಕ್ತಿ ದೊರೆಯುತ್ತದೆ, ಕೇಂದ್ರದಿಂದ ಕೊಟ್ಟ ಹಣ, ರಾಜ್ಯ ಬಜೆಟ್ ನಲ್ಲಿ ಮಂಡಿಸಿ ಖರ್ಚಾದ ಹಣ ಬರಿ ಶೇಕಡ ೨೫% ಮಾತ್ರ ಎಂದು ತಿಳಿಸಿ, ಉಳಿದ ಹಣ ಏನು ಮಾಡಿದಿರಿ? ಜನರ ಹಣವನ್ನು ಲೂಟಿ ಮಾಡಿತ್ತಿದ್ದೀರ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಮೂಲಸೌಲಭ್ಯ ನೀಡಿ ಜನರನ್ನು ನೆಮ್ಮದಿಯಾಗಿಡುವ ಭರವಸೆ ನೀಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿಗೆ ಬಿಡುಗಡೆಯಾಗಿದ್ದ ಹಣದಿಂದ ಕಾಮಗಾರಿ ನಡೆಯುತ್ತಿದೆ ಹೊರತು ಕಾಂಗ್ರೆಸ್ ಸರ್ಕಾರದಿಂದಲ್ಲ ಎಂದು ಮಾಜಿ ಶಾಸಕ ನರಸಿಂಹಸ್ವಾಮಿ ಹೇಳಿದರು.
ಕೇಂದ್ರ ಸಚಿವ ಶ್ರೀ ಅನಂತಕುಮಾರ್, ಶ್ರೀ ಆರ್.ಅಶೋಕ್, ಶ್ರೀ ಕಾರಜೋಳ, ಶ್ರೀ ಕುಮಾರ್ ಬಂಗಾರಪ್ಪ, ಶ್ರೀ ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು, ಶ್ರೀ ನರೇಂದ್ರಬಾಬು, ಶ್ರೀ ರೇಣುಕಾಚಾರ್ಯ, ಶ್ರೀ ಎಸ್. ಆರ್. ವಿಶ್ವನಾಥ್, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಹನುಮಂತರಾಯಪ್ಪ, ತಾಲ್ಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Comments