ಡಾ.ಸಿ.ನಾರಾಯಣ ರೆಡ್ಡಿ, ತಾಲ್ಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ
ಮುಂದಿನ ತಿಂಗಳು ಫೆಬ್ರವರಿಯಲ್ಲಿ ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಆಯ್ಕೆಯಾದ, ಸರಳ ಸಜ್ಜನಿಕೆಯ, ನಿರ್ಮಲ ಮನಸ್ಸಿನ, ರೈತರ ದಾರಿದೀಪ ರಾಜ್ಯ ಪ್ರಶಸ್ತಿ ವಿಜೇತರಾದ ನಾಡೋಜ ಡಾ.ಸಿ.ನಾರಾಯಣ ರೆಡ್ಡಿ ಯವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಮೀಳಮಹಾದೇವ್, ಕನ್ನಡಪರ ಹಿರಿಯ ಹೋರಾಟಗಾರರೂ ನಗರಸಭೆಯ ಅಧ್ಯಕ್ಷರಾದ ತ.ನ. ಪ್ರಭುದೇವ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ಪ್ರಾಂಶುಪಾಲರೂ, ಕನ್ನಡ ಪ್ರಭ ವರದಿಗಾರರಾದ ಕೆ.ಆರ್. ರವಿಕಿರಣ್, ಕಸಾಪ ಸ್ಥಾಪಕ ಕಾರ್ಯದರ್ಶಿ ಖಲೀಲ್ಲುಲ್ಲಾಖಾನ್, ಕರವೇ ಶಿವರಾಮೇ ಗೌಡರ ಬಣದ ತಾ.ಅಧ್ಯಕ್ಷರೂ ಪದಾಧಿಕಾರಿಗಳು, ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷರಾದ ಎನ್.ಮಹಾದೇವ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ನಗರ ಅಧ್ಯಕರಾದ ಕೆ.ಕೆ.ವೆಂಕಟೇಶ್, ಪತ್ರಕರ್ತ ಗಂಗರಾಜ ಶಿರಾವಾರ, ಸೂರ್ಯ ನಾರಾಯಣ್, ವಿ.ಸಿ. ಜ್ಯೋತಿ ಕುಮಾರ್, ಸು.ಸಂ. ಬದ್ರಿನಾಥ್ ಹಾಗೂ ಕನ್ನಡ ಸಂಘನೆಯ ಪದಾಧಿಕಾರಿಗಳು ಮರಳೇನಹಳ್ಳಿಯ ಸ್ವಗೃಹದಲ್ಲಿ ಆತ್ಮೀಯವಾಗಿ ಗೌರವಿಸಿ, ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಯಿತು.
Comments