ಕೆಪಿಜೆಪಿಯ 2ನೇ ಪ್ರಣಾಳಿಕೆಯಲ್ಲಿದೆ ಹಸಿರು ಕರ್ನಾಟಕದ ಕನಸು..!
ಉಪೇಂದ್ರಾರ ಪ್ರಣಾಳಿಕೆ ಓದುತ್ತಿದ್ದರೆ ಸಿನಿಮಾ ನೋಡಿದ ಹಾಗೆ ಆಗುತ್ತದೆ. ಆದರೆ ಈ ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಆದರೆ ಅವರಿಗೆ ಉಪೇಂದ್ರಾರ ಸೂಪರ್ ಐಡಿಯಾದ ಬಗ್ಗೆ ಗೊತ್ತಿರಲಿಕ್ಕಿಲ್ಲ. ತಮ್ಮ ಸಿನಿಮಾದಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಕರುನಾಡಿನ ಜನರ ಮನ ಗೆದ್ದಿರುವ ಸೂಪರ್ ಸ್ಟಾರ್ ಉಪೇಂದ್ರ, ರಾಜಕಾರಣದಲ್ಲೂ ಅದೇ ಫಾರ್ಮುಲ ಅಪ್ಲೈ ಮಾಡಿದ್ದಾರೆ ಎನಿಸುತ್ತದೆ.
ಹೌದು ತಮ್ಮ ಮೊದಲ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಬಂದರೆ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿರುವ ಇವರು. ಆ ವ್ಯವಸ್ಥೆಯನ್ನು ಜಾರಿಗೆ ತರಲಿಕ್ಕೆ ಏಕೆ ಸಾಧ್ಯವಿಲ್ಲ..? ಎಂಬ ಪ್ರಶ್ನೆಯನ್ನ ಯುವಜನತೆಯ ತಲೆಗೆ ಬಿಟ್ಟಿದ್ದಾರೆ. ಈಗಿರುವ ವ್ಯವಸ್ಥೆಯನ್ನು ನಿರ್ಮಾಣ ಮಾಡಿರುವುದು ನಮ್ಮನ್ನಾಳುವ ಜನ ನಾಯಕರೇ ಅಲ್ಲವೇ..? ಆ ನಾಯಕರನ್ನು ಬದಲಿಸಿದರೆ ಈ ವ್ಯವಸ್ಥೇಯನ್ನು ಬದಲಿಸುವುದು ಕಷ್ಟವೇನಲ್ಲ ಎಂಬ ಸತ್ಯವನ್ನ ಎಲ್ಲರಿಗೂ ಅರ್ಥವಾಗುವಂತೆಯೇ ಹೇಳಿದ್ದಾರೆ. ಮೊದಲ ಪ್ರಣಾಳಿಕೆಗೆ ದಂಗಾಗಿರುವ ಇತರೆ ರಾಜಕೀಯ ಪಕ್ಷಗಳು ಇವರ 2ನೇ ಪ್ರಣಾಳಿಕೆಯನ್ನು ಓದಿದರೆ ಈ ರೀತಿಯ ಆಲೋಚನೆ ನಮಗೇಕೆ ಬರುವುದಿಲ್ಲ ಎಂದು ಯೋಚಿಸುತ್ತಾರೆ. ಪಾರದರ್ಶಕ ಸ್ವಚ್ಚ ಮತ್ತು ಸಾರ್ವಜನಿಕ ಸಹಬಾಗಿತ್ವದ ಸರ್ಕಾರದ ಕನಸು ಕಾಣುತ್ತಿರುವ ಉಪೇಂದ್ರ ತಮ್ಮ 2ನೇ ಪ್ರಣಾಳಿಕೆಯಲ್ಲಿ ರೈತರು ಮತ್ತು ಗ್ರಾಮೀಣರ ಬದುಕಿಗೆ ಆಸರೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಇಲಾಖೆಗಳ ಮೂಲಕ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದರ ಬದಲಾಗಿ ನೇರವಾಗಿ ಗ್ರಾಮಪಂಚಾಯಿತಿಗಳಿಗೆ ಫಂಡ್ ನೀಡುವ ಮೂಲಕ ಸರ್ಕಾರದಿಂದ ನೇರವಾಗಿ ಫಲಾನುಭವಿಗೆ ಹಣ ತಲುಪುವಂತೆ ಮಾಡಿದರೆ, ತಾನಾಗೆಯೇ ಹಳ್ಳಿಗಳು ಸೂಪರ್ ಹಳ್ಳಿಗಳು ಬದಲಾಗುತ್ತವೆ ಎಂಬ ಆಶಯಗಳನ್ನ ವ್ಯಕ್ತಪಡಿಸಿದ್ದಾರೆ. ಈ ಪ್ರಣಾಳಿಕೆಯು ಸಂಪೂರ್ಣವಾಗಿ ರೈತರಿಗಾಗಿಯೇ ಮಾಡಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಬೇರೆ ಬೇರೆ ವಲಯಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಏನೇ ಆಗಲಿ ಅಜ್ಜ ಹಾಕಿದ ಆಲದಮರ ಎಂದು ಸಾಂಪ್ರದಾಯಿಕವಾಗಿ ರಾಜಕಾರಣ ಮಾಡುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿ ಯೋಚಿಸುವ ಮೂಲಕ ಯುವ ಮನಸ್ಸುಗಳನ್ನು ಗೆದ್ದರುವ ಉಪೇಂದ್ರಾರ ಒಂದೊಂದು ಯೋಚನೆಗಳು ರಾಜ್ಯದ ಅಭಿವೃದ್ದಿಗೆ ಅಡಿಗಲ್ಲಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಉಪೇಂದ್ರಾರ ಯೋಚನೆಗಳನ್ನು ಕೇಳಿದಾಗ ಹೌದು ಸತ್ಯ ಎಂದು ನಿಮಗೆ ಅನಿಸಿದರೆ ಈ ಚುನಾವಣೆಯಲ್ಲಿ ಉಪೇಂದ್ರಾರನ್ನ ಸಪೋರ್ಟ್ ಮಾಡಿ..! ಈ ಲೇಖನವನ್ನು ಶೇರ್ ಮಾಡಿ ಉಪೇಂದ್ರಾರ ಆಲೋಚನೆಗಳನ್ನ ಮತ್ತಷ್ಟು ಜನರಿಗೆ ತಲುಪಿಸಿ.
Comments